ಫೆ.21ರಂದು ‘ಮೀರಾ’ ತುಳು ಚಲನಚಿತ್ರ ಬಿಡುಗಡೆ

mng-jan15-meera
Published on

ಮಂಗಳೂರು : ಅಸ್ತ್ರ ಪ್ರೊಡಕ್ಷನ್‌ನ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ‘ಮೀರಾ’ ತುಳು ಚಲನಚಿತ್ರ ಫೆ.21ರಂದು ಬಿಡುಗಡೆಗೊಳ್ಳಲಿದೆ

ಇದು ತುಳುವಿನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಹೆಣ್ಣಿನ ಕನಸು, ನೋವು, ನಲಿವನ್ನು ಕೇಂದ್ರೀಕರಿಸಿರುವ ಗಟ್ಟಿ ಕಥೆಯನ್ನು ಹೊಂದಿದೆ. ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಲು, ಸವಾಲುಗಳನ್ನು ಎದುರಿಸಿ ಸಾಧಿಸಲು ಸ್ಪೂರ್ತಿ ನೀಡಲಿದೆ. ಮಂಗಳೂರು, ಕಟೀಲು, ಕಾಸರಗೋಡು, ಸೀತಾಂಗೋಳಿ, ಕುಂಬಳೆ ಮೊದಲಾದೆಡೆ ಚಿತ್ರೀಕಣಗೊಂಡಿದ್ದು ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಟ ಯತೀಶ್ ಪೂಜಾರಿ ಮತ್ತು ನಿರ್ಮಾಪಕ ಲಂಚುಲಾಲ್ ಕೆ.ಎಸ್. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅರವಿಂದ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ಪೋರ್ಕಾಡಿ ಮೊದಲಾದವರು ಅಭಿನಯಿಸಿದ್ದಾರೆ. ಅಲ್ಲದೆ ಮುಂಬೈ ಮೂಲದ ನಟಿ ರಕ್ಷಿತಾ ಶೆಟ್ಟಿ ಸಹಿತ ಕರಾವಳಿಯ ಅನೇಕ ಪ್ರತಿಭೆಗಳು ಪಾತ್ರ ಮಾಡಿದ್ದಾರೆ. ಮಧುಬಾಲಕೃಷ್ಣ ಸೇರಿದಂತೆ ಹೆಸರಾಂತ ಗಾಯಕರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿವೆ. ತುಳು ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಎಐ ತಂತ್ರಜ್ಞಾನದಲ್ಲಿ ತಯಾರಿಸಿದ ಹಾಡು ಕೂಡ ಈ ಸಿನಿಮಾದಲ್ಲಿದೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಅಶ್ವಥ್, ನಾಯಕಿ ಇಶಿತಾ ಶೆಟ್ಟಿ, ಸಂಗೀತ ನಿರ್ದೇಶಕ ರಜ್ನು ಜಯಪ್ರಕಾಶ್, ಸಹಾಯಕ ನಿರ್ದೇಶಕ ಜಿತಿನ್ ಕುಂಬ್ಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net