ರಸ್ತೆ ಗೇಟ್ ತೆರವುಗೊಳಿಸುವಂತೆ ಮನವಿ

madamakki
ಅಗಳಿಬೈಲು ಶ್ರೀ ಕೋಟೆರಾಯ ದೇವಸ್ಥಾನ ಸಂಪರ್ಕ ರಸ್ತೆಯನ್ನು ಖಾಸಗಿ ವ್ಯಕ್ತಿ ಕಡಿತಗೊಳಿಸಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು
Published on

ಸಿದ್ದಾಪುರ: ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಳಿಬೈಲು ಶ್ರೀ ಕೋಟೆರಾಯ ದೇವಸ್ಥಾನ ಸಂಪರ್ಕ ರಸ್ತೆಯನ್ನು ಖಾಸಗಿ ವ್ಯಕ್ತಿ ಕಬ್ಬಿಣದ ಗೇಟ್ ಅಳವಡಿಸಿ ಬೀಗ ಜಡಿದು ರಸ್ತೆ ಸಂಪರ್ಕ ಕಡಿತಗೊಳಿಸಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಅಗಳಿಬೈಲು ಹಾಗೂ ಸುತ್ತಮುತ್ತಲಿನ ಜನರು ಮಡಾಮಕ್ಕಿ ಗ್ರಾಮ ಪಂಚಾಯಿತಿಗೆ ಸೋಮವಾರ ಮನವಿ ಸಲ್ಲಿಸಿದರು.

ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಮನವಿ ಸ್ವೀಕರಿಸಿ, ರಸ್ತೆ ಕಡಿತಗೊಳಿಸಿರುವುದನ್ನು ಜನರ ಅನುಕೂಲಕ್ಕಾಗಿ ತೆರವುಗೊಳಿಸಲು ಸ್ಪಂದಿಸುವುದಾಗಿ ತಿಳಿಸಿದರು.

ಪಿಡಿಒ ರಿತೇಶ್ ಎನ್.ಪುತ್ರನ್ ಮನವಿ ಸ್ವೀಕರಿಸಿದರು. ಅಗಳಿಬೈಲು ಪರಿಸರದ ನಿವಾಸಿಗಳಾದ ಸತೀಶ್ಚಂದ್ರ ಶೆಟ್ಟಿ, ನಾಗರತ್ನಾ ಶೆಟ್ಟಿ, ಗುಲಾಬಿ ಶೆಟ್ಟಿ, ಮದನ್ ಪೂಜಾರಿ, ಸುಬ್ಬಣ್ಣ ಶೆಟ್ಟಿ, ಸುಧಾಕರ ಶೆಟ್ಟಿ, ಶ್ರೀಧರ ಹೆಗ್ಡೆ, ಎಚ್.ಉದಯ ಶೆಟ್ಟಿ, ಯೋಗೀಶ್ ಅಗಳಿಬೈಲು,ಪ್ರಶಾಂತ ಶೆಟ್ಟಿ, ಪ್ರಸನ್ನ ಶೆಟ್ಟಿ, ಗಣೇಶ್ ಅರಸಮ್ಮಕಾನು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net