

ಕೋಟ: ಇಲ್ಲಿನ ಡಾ.ಶಿವರಾಮ ಕಾರಂತ ಅನೌಪಚಾರಿಕ ಕೇಂದ್ರ ವತಿಯಿಂದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುವ ಚಿತ್ರಕಲಾ, ಯಕ್ಷಗಾನ ನೃತ್ಯ ತರಗತಿಯ ಶೈಕ್ಷಣಿಕ ವರ್ಷದ ಆರಂಭೋತ್ಸವನ್ನು ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ ಉದ್ಘಾಟಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕ್ರಿಯೇಟಿವ್ ಆರ್ಟ್‌ನ ಚಿತ್ರಕಲಾ ಶಿಕ್ಷಕ ಗಿರೀಶ್ ಆಚಾರ್ಯ ವಕ್ವಾಡಿ, ಯಕ್ಷಗಾನ ನೃತ್ಯ ಶಿಕ್ಷಕಿ ಸಂಗೀತ ಕಾರ್ತಟ್ಟು ಉಪಸ್ಥಿತರಿದ್ದರು.