

ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕುಳಾಯಿತ್ತೋಡಿಯಲ್ಲಿ ನಿರ್ಮಾಣವಾಗಲಿರುವ 33 ಕೆ.ವಿ. ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ತ್ವರಿತವಾಗಿ ಪೂರೈಸುವಂತೆ ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯದ ವತಿಯಿಂದ ಮೆಸ್ಕಾಂ ಸುಬ್ರಹ್ಮಣ್ಯ ಉಪಕೇಂದ್ರದ ಸಹಾಯಕ ಇಂಜಿನಿಯರ್‌ಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ಮೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೂ ಮನವಿ ನೀಡಲಾಯಿತು.
ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಕುಳಾಯಿತ್ತೋಡಿ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನೆರವಾಗಬೇಕೆಂದು ವಿನಂತಿಸಲಾಯಿತು. ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಅಧ್ಯಕ್ಷೆ ಶ್ರೀನಂದನ ಕೆ. ಮನವಿ ಹಸ್ತಾಂತರಿಸಿದರು.
ಸುಳ್ಯದ ಭಾರತೀಯ ಕಿಸಾನ್ ಸಂಘ ಅಧ್ಯಕ್ಷ ಎಂ.ಜಿ.ಪ್ರಭಾಕರ ರೈ, ಸದಸ್ಯರಾದ ನೆಟ್ಟಾರು ಗೋಪಾಲಕೃಷ್ಣ ಭಟ್, ಕರ್ವಂಕಲ್ಲು ಗೋಪಾಲಕೃಷ್ಣ ಭಟ್, ಸೀತಾರಾಮ, ಪಿ.ಆರ್.ಭಟ್, ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಕಾರ್ಯದರ್ಶಿ ಯತಿರಾಜ ಉಪಸ್ಥಿತರಿದ್ದರು.