Renukaswamy Murder Case: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾಗೆ ಶಾಕ್​ ಕೊಟ್ಟ ಸುಪ್ರೀಂ: ಕಾರಣವೇನು?

Bbau - 2025-11-08T122707.886
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Murder Case) ಜೈಲು ಸೇರಿರುವ ಎ1 ಆರೋಪಿ ಪವಿತ್ರಾ ಗೌಡಗೆ ಸುಪ್ರೀಂಕೋರ್ಟ್​ ಮತ್ತೆ ಶಾಕ್ ನೀಡಿದೆ.

ಹೌದು, ಕರ್ನಾಟಕ ಹೈಕೋರ್ಟ್​ ನೀಡಿದ್ದ ಜಾಮೀನು ಅನ್ನು ಸುಪ್ರೀಂ ಈ ಹಿಂದೆ ವಜಾ ಮಾಡಿತ್ತು. ಇದನ್ನು ಪುನರ್​ ಪರಿಶೀಲಿಸುವಂತೆ ಮತ್ತೆ ಮನವಿ ಮಾಡಿದ್ದರು. ಇದೀಗ ಇದನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲ್ ಮತ್ತು ಆರ್. ಮಹಾದೇವನ್ ಅವರ ಪೀಠ ಅರ್ಜಿ ವಜಾ ಮಾಡಿದೆ.

‘ನಾವು ತೀರ್ಪು ಮತ್ತು ದಾಖಲೆಗಳನ್ನು ಈ ಹಿಂದೆಯೇ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದೇವೆ. ಆ ಬಳಿಕವೇ ಆದೇಶ ನೀಡಿದ್ದೆವೆ. ಮತ್ತೋಮ್ಮೆ ಪರಿಶೀಲನೆ ನಡೆಸಿ ಆದೇಶ ಮಾಡುವ ಅಗತ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

2024ರ ಜೂನ್​ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್​ನಲ್ಲಿ ನಟ ದರ್ಶನ್​ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net