ರುಕ್ಮಿಣಿ ವಸಂತ್ ಹೆಸರಿನಲ್ಲಿ ಹಣ ಸುಲಿಗೆ! ‘ಕಾಂತಾರ’ದ ಕನಕವತಿ ಹೇಳಿದ್ದೇನು ಗೊತ್ತಾ?..Rukmini Vasanth

Rukmini Vasanth
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರುಕ್ಮಿಣಿ ವಸಂತ್ (Rukmini Vasanth)  ಹೆಸರಿನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ ಕೇಳುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ರುಕ್ಮಿಣಿ ವಸಂತ್  ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಎಚ್ಚರಿಕೆ ನೀಡಿದ್ದಾರೆ.

ರುಕ್ಮಿಣಿ ವಸಂತ್ ಮಾಡಿರುವ ಟ್ವೀಟ್‌:

ರುಕ್ಮಿಣಿ ವಸಂತ್ ಮಾಡಿರುವ ಟ್ವೀಟ್‌ನಲ್ಲಿ, 9445893273 ಸಂಖ್ಯೆಯನ್ನು ಬಳಸುವ ವ್ಯಕ್ತಿಯೊಬ್ಬ ನನ್ನಂತೆ ನಟಿಸಿ ನಾನಾ ಜನರನ್ನು ಸಂಪರ್ಕಿಸಿ ಹಣ ಕೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನ್ನದಲ್ಲ ಮತ್ತು ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ನಕಲಿ. ದಯವಿಟ್ಟು ಅಂತಹ ಸಂದೇಶಗಳಿಗೆ ಉತ್ತರಿಸಬೇಡಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅಥವಾ ಅವರೊಂದಿಗೆ ಯಾವುದೇ ರೀತಿಯ ವ್ಯವಹಾರದಲ್ಲೂ ತೊಡಗಿಸಿಕೊಳ್ಳಬೇಡಿ ಎಂದು ರುಕ್ಮಿಣಿ ಎಚ್ಚರಿಸಿದ್ದಾರೆ.

ಈ ಸೋಗು ಹಾಕುವ ಕೃತ್ಯ ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ ಮತ್ತು ಅಂತಹ ವಂಚನೆಯ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ

ನಟಿ ರುಕ್ಮಿಣಿ ವಸಂತ್ ಅವರು ಜನರನ್ನು ಎಚ್ಚರಿಸಿದ್ದಾರೆ. ಜೊತೆಗೆ ಬೆಂಗಳೂರು ಸಿಟಿ ಪೊಲೀಸ್ ಹಾಗೂ ಸೈಬರ್ ಕ್ರೈಮ್ ಸಿಐಡಿ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಈ ಮೂಲಕವಾಗಿ ನಟಿ ಅವರ ಹೆಸರಿನಲ್ಲಿ ಕರೆ ಬರುತ್ತಿರುವ ಸಂಖ್ಯೆಯನ್ನೂ ಬಹಿರಂಗವಾಗಿ ಪೋಸ್ಟ್ ಮಾಡಿ, ನನ್ನ ಹೆಸರಿನಲ್ಲಿ ನಕಲಿ ಕರೆ ಮತ್ತು ಮಸೇಜ್ ಮಾಡುತ್ತಿದ್ದಾರೆ. ಅದಕ್ಕೆ ಉತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net