ರೇಣುಕಸ್ವಾಮಿ ಹತ್ಯೆ ಹಿಂದಿನ ಮಾಸ್ಟರ್​ಮೈಂಡ್​ ಯಾರು ಗೊತ್ತಾ?; ತನಿಖೆಯಲ್ಲಿ ಬೆಳಕಿಗೆ ಬಂತು ಮತ್ತೊಂದು ಸ್ಫೋಟಕ ಅಂಶ

Darshan
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಸೇರಿದಂತೆ 19ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಪ್ರಕರಣದ ಆಳ ಕೆದಕಿದಷ್ಟು ಹೊಸ ವಿಚಾರಗಳು ಹೊರಬರುತ್ತಿವೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ವಿಚಾರಣೆ ತೀವ್ರಗೊಂಡಂತೆ ಡಿ ಗ್ಯಾಂಗ್​ನ ಕರಾಳ ಮುಖ ಬೆಳಕಿಗೆ ಬರುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರ ಒಂದು ಬೆಳಕಿಗೆ ಬಂದಿದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಸ್ಥಳ ಮಹಜರು ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್​ ಮ್ಯಾನೇಜರ್​ ಎಂದು ಕರೆಯಲ್ಪಡುವ ನಾಗ ಹಾಗೂ ಚಾಲಕ ಲಕ್ಷ್ಮಣ್​ನನ್ನು ಪೊಲೀಸರು ಮೈಸೂರಿನಲ್ಲಿರುವ ರ್‍ಯಾಡಿಸನ್​ ಬ್ಲೂ ಹೋಟೆಲ್​ನಲ್ಲಿ ಸ್ಥಳ ಮಹಜರು ನಡೆಸಿದ್ದರು. ಈ ಹೋಟೆಲ್​ನಲ್ಲಿ ರೇಣುಕಸ್ವಾಮಿ ಹತ್ಯೆಗೆ ಸ್ಕೆಚ್​ ಹಾಕಲಾಗಿತ್ತು ಎಂದು ತಿಳಿದು ಬಂದಿದ್ದು, ಇದರ ಬೆನ್ನಲ್ಲೇ ಪ್ರಕರಣದ ಮಾಸ್ಟರ್​ಮೈಂಡ್​ ಹೆಸರು ಕೂಡ ಹೊರಬಂದಿದೆ.

ದರ್ಶನ್​ ಮ್ಯಾನೇಜರ್ ಆಗಿ ಗುರುತಿಸಿಕೊಂಡಿರುವ ಆರೋಪಿ ನಾಗ ರೇಣುಕಸ್ವಾಮಿ ಹತ್ಯೆ ಹಿಂದಿನ ಮಾಸ್ಟರ್​ಮೈಂಡ್​ ಎಂದು ತಿಳಿದು ಬಂದಿದೆ. ಏಕೆಂದರೆ ದರ್ಶನ್​ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಆರೋಪಿ ನಾಗ ಯಾರ ಮೂಲಕ ರೇಣುಕಸ್ವಾಮಿ ಕರೆಸಬೇಕು ಎಂದು ನಾಗ ತನ್ನ ಸಂಗಡಿಗರೊಂದಿಗೆ ಪ್ಲ್ಯಾನ್‌ ಮಾಡಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕಾಗಿ ಮೈಸೂರಿನ ರ್‍ಯಾಡಿಸನ್​ ಬ್ಲೂ ಹೋಟೆಲ್​ನಲ್ಲಿ ಪ್ಲ್ಯಾನ್​ ಹಾಕಿದ್ದ ಎಂದು ತಿಳಿದು ಬಂದಿದೆ. ಈ ಕಾರಣಕ್ಕಾಗಿ ಪೊಲೀಸರು ಹೋಟೆಲ್​ನಲ್ಲಿ ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಪ್ರಕರಣದ ಪ್ರಮುಖ ಸಾಕ್ಷ್ಯ ಎಂದು ಹೇಳಲಾದ ರೇಣುಕಸ್ವಾಮಿ ಮೊಬೈಲ್​ಗೆ ಶೋಧ ಕಾರ್ಯ ಮುಂದುರೆದಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net