ಸಾಯೋಕು ಮುನ್ನ ರೇಣುಕಾಸ್ವಾಮಿ ಕಣ್ಣೀರಿಟ್ಟು ಪ್ರಾಣಭಿಕ್ಷೆ ಕೇಳ್ತಿರೋ ಫೋಟೋ ವೈರಲ್‌

darshan
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿಯನ್ನು ಅತ್ಯಂತ ಕ್ರೂರವಾಗಿ ನಟ ದರ್ಶನ್ ಆಂಡ್ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಂದಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ದರ್ಶನ್​ ಮತ್ತು ಗ್ಯಾಂಗ್​ನಿಂದ ಕೊಲೆಯಾಗಿದ್ದ ರೇಣುಕಾಸ್ವಾಮಿ ಫೋಟೋಗಳು ಪೊಲೀಸರಿಗೆ ಸಿಕ್ಕಿದೆ. ಡಿಲೀಟ್ ಆದ ಫೋಟೋಗಳನ್ನ ​ರಿಟ್ರೀವ್ ಮಾಡಿದ ಬಳಿಕ ರೇಣುಕಾಸ್ವಾಮಿಯ ಕೆಲವು ಫೋಟೋಗಳು ಪೊಲೀಸರ ಕೈ ಸೇರಿವೆ.

ಕೊಲೆಯಾದ ರೇಣುಕಾಸ್ವಾಮಿ ಫೋಟೋಗಳನ್ನು ಆರೋಪಿ ವಿನಯ್ ಮೊಬೈಲ್​ನಲ್ಲಿ ಸೆರೆಹಿಡಿದಿದ್ದನು. ಫೋಟೋ ಕ್ಲಿಕ್ಕಿಸಿ ಬಳಿಕ ಸ್ಮಾರ್ಟ್​ಫೋನ್​ನಿಂದ ಡಿಲೀಟ್ ಮಾಡಿದ್ದನು. ಆದರೆ FSL ಟೀಂ ಡಿಲೀಟ್ ಆದ ಫೋಟೋಗಳನ್ನ ​ರಿಟ್ರೀವ್ ಮಾಡಿದೆ.
ವಿನಯ್ ಫೋನ್​​ನಲ್ಲಿದ್ದ 10ಕ್ಕೂ ಹೆಚ್ಚು ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ.

 ಬ್ಲೂ ಜೀನ್ಸ್ & ವೈಟ್ ಹಾಫ್ ಸ್ಲೀವ್ ಬನಿಯನ್ ಹಾಕಿರೋದು ಕಂಡುಬಂದಿದೆ. ಗಂಭೀರವಾಗಿ ಗಾಯಗೊಂಡು ಬಿದ್ದಿರುವ ರೇಣುಕಾಸ್ವಾಮಿ ಫೋಟೋ ರಿಟ್ರೀವ್ ವೇಳೆ ದೊರೆತಿದೆ. ಆತನ ಕೈಗೆ & ಕಾಲಿಗೆ ಕರೆಂಟ್ ಶಾಕ್ ನೀಡಿರುವ ಫೋಟೋ ಕೂಡ ಪೊಲೀಸರಿಗೆ ದೊರೆತಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net