ಬೆಂಗಳೂರು: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಆಗಿರುವ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಿಲನಾ ನಾಗರಾಜ್ ಅವರು ತಾಯಿ ಆಗಿದ್ದಾರೆ. ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ.
ಪತ್ನಿ ಮಿಲನಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಕೃಷ್ಣ ತಿಳಿಸಿದ್ದಾರೆ. ಇದು ಹೆಣ್ಣು ಮಗು ಎಂದು ಮುತ್ತಿರುವ ಎಮೋಜಿ ಹಾಕಿರುವ ಕೃಷ್ಣ, ತಾಯಿ ಮತ್ತು ಮಗು ಚೆನ್ನಾಗಿದ್ದಾರೆ. ಈ ಪಯಣದಲ್ಲಿ ನೀವು ತೋರಿದ ನೋವು, ತ್ಯಾಗ ಮತ್ತು ಧೈರ್ಯಕ್ಕಾಗಿ @milananagaraj ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಈ ಅದ್ಭುತ ಪ್ರಯಾಣದಲ್ಲಿ ಸಾಗುತ್ತಿರುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಮಹಿಳೆಯರ ಬಗ್ಗೆ ನನ್ನ ಗೌರವವು ದ್ವಿಗುಣಗೊಂಡಿದೆ. ನಾನು ಹೆಮ್ಮೆ ಮತ್ತು ಅದೃಷ್ಟದ ತಂದೆ ಏಕೆಂದರೆ ನನಗೆ ಈಗ ಮಗಳಿದ್ದಾಳೆ ಎಂದು ಡಾರ್ಲಿಂಗ್ ಕೃಷ್ಣ ಖುಷಿಯಿಂದ ಪೋಸ್ಟ್ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಕಲಾವಿದರು ಹಾಗೂ ಕಿರುತೆರೆ ಕಲಾವಿದರು, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಅವರಿಗೆ ಶುಭಾಷಯ ಹೇಳ್ತಿದ್ದಾರೆ..