ನನಗೂ ಸಂಗಾತಿ ಬೇಕು.. ಆದರೆ ಆ ಒಂದು ಕಾರಣಕ್ಕೆ ಮರುಮದುವೆಯಾಗಲಿಲ್ಲ; ರೇಣು ದೇಸಾಯಿ ಹೇಳಿದ್ದೇನು? | Renu Desai

Untitled design
Published on

ಹೈದರಾಬಾದ್​: ಟಾಲಿವುಡ್​​ ಪವರ್​ ಸ್ಟಾರ್​​ ಪವನ್ ಕಲ್ಯಾಣ್ ಅವರಿಗೆ ಮೂರು ಮದುವೆಯಾಗಿರುವುದು ಗೊತ್ತೆ ಇದೆ. ಅವರು ನಟಿ ರೇಣು ದೇಸಾಯಿ(Renu Desai) ಅವರಿಂದ ವಿಚ್ಛೇದನ ಪಡೆದು ಬೇರೆಯಾದ ಕೆಲವು ವರ್ಷಗಳ ನಂತರ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಆದರೆ ರೇಣು ಮರುಮದುವೆಯಾಗದೆ ಒಂಟಿಯಾಗಿರಲು ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಪಾಡ್​ಕ್ಯಾಸ್ಟ್​ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ರೇಣು ದೇಸಾಯಿ ಅವರನ್ನು ನಿಮ್ಮ ಜೀವನದಲ್ಲಿ ಒಬ್ಬ ಸಂಗಾತಿ ಇದ್ದರೆ ಚೆನ್ನಾಗಿರುತ್ತದೆ ಎಂದು ನೀವು ಎಂದಾದರೂ ಭಾವಿಸುತ್ತೀರಾ ಎಂದು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ರೇಣು ದೇಸಾಯಿ, ಖಂಡಿತವಾಗಿಯೂ ನನಗೂ ಒಬ್ಬ ಸಂಗಾತಿ ಬೇಕು ಅನಿಸುತ್ತಿದೆ. ಹೌದು ನನಗೆ ಗೆಳೆಯ ಇರಬೇಕು, ನನಗೆ ಮದುವೆ ಇರಬೇಕು, ನನಗೆ ಒಂದು ಜೀವನ ಇರಬೇಕು ಎನ್ನಿಸುತ್ತದೆ. ಆದರೆ ನಾನು ಅದನ್ನು ಮಕ್ಕಳ ದೃಷ್ಟಿಕೋನದಿಂದ ನೋಡಿದಾಗ ನನ್ನ ಆಲೋಚನೆ ಬೇರೆಯಾಗುತ್ತದೆ ಎಂದಿದ್ದಾರೆ.

ಅಲ್ಲದೆ ಅದೇ ಸಮಯದಲ್ಲಿ 2018ರಲ್ಲಿ ಮುರಿದ ತನ್ನ ನಿಶ್ಚಿತಾರ್ಥದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ವ್ಯವಸ್ಥಿತ ನಿಶ್ಚಿತಾರ್ಥ ಮಾಡಿಕೊಂಡು ಬೇರೆ ಸಂಬಂಧಕ್ಕೆ ಹೋಗಬೇಕೆಂದು ಭಾವಿಸಿದೆ. ಆದರೆ ಸಂಬಂಧಕ್ಕಾಗಲಿ ಅಥವಾ ಮಕ್ಕಳಿಗಾಗಲಿ ನಾನು ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿ ನಾನು ನಿಲ್ಲಿಸಿದೆ. ಮಕ್ಕಳು ಬೆಳೆಯುತ್ತಿದ್ದಾರೆ. ಈಗ ನಾನು ಬೇರೆಯವರ ಜತೆ ಇನ್ನೊಂದು ಜೀವನ ಆರಂಭಿಸಿದರೆ ನನ್ನ ಮಕ್ಕಳಿಗೆ ಪೂರ್ಣ ಸಮಯ ನೀಡಲು ಸಾಧ್ಯವಾಗುವುದಿಲ್ಲ ಅದಕ್ಕಾಗಿಯೇ ನಾನು ಬೇರೆ ಸಂಬಂಧಕ್ಕೆ ಹೋಗಲಿಲ್ಲ ಎಂದರು.

ನನ್ನ ಮಗಳು ಆದ್ಯಾ ದೊಡ್ಡವಳಾಗಲು ನಾನು ಕಾಯುತ್ತಿದ್ದೇನೆ. ಅವಳಿಗೆ ಈಗ 15 ವರ್ಷ, 18 ವರ್ಷ ತುಂಬಿದಾಗ ಮತ್ತು ಎಲ್ಲವನ್ನೂ ಅವಳು ನಿರ್ಧರಿಸಬಲ್ಲಳು ಎಂದು ತಿಳಿದಾಗ ಅದರ ಬಗ್ಗೆ ಯೋಚಿಸಬಹುದು ಎಂದು ಹೇಳಿದಳು. ಇದು ರೇಣು ದೇಸಾಯಿ ಭವಿಷ್ಯದಲ್ಲಿ ಎರಡನೇ ಬಾರಿಗೆ ಮದುವೆಯಾಗುವ ಸಾಧ್ಯತೆಗಳಿವೆ ಎಂದು ಸೂಚಿಸುತ್ತದೆ. ರೇಣು 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಆದರೆ ತನ್ನ ನಿಶ್ಚಿತಾರ್ಥದ ಪತಿಯ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು ಏಕೆಂದರೆ ಅವರು ಸಾರ್ವಜನಿಕ ವ್ಯಕ್ತಿಯಾಗಿರಲಿಲ್ಲ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net