ಟಾಲಿವುಡ್​ ಐಕಾನ್​ ಸ್ಟಾರ್​​ ನಿವಾಸದ ಹೊರಗೆ ಅಭಿಮಾನಿಗಳ ದಂಡು; ಕೈಮುಗಿದು ಧನ್ಯವಾದ ಹೇಳಿದ ಅಲ್ಲು ಅರ್ಜುನ್​​ | Allu Arjun Birthday

Untitled design - 2025-04-08T180644.521
Published on

ಹೈದರಾಬಾದ್​: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​​ ಇಂದು(ಏಪ್ರಿಲ್​ 8) 43ನೇ ವಸಂತಕ್ಕೆ( Allu Arjun Birthday) ಕಾಲಿಟಿದ್ದಾರೆ. ಅವರ ಈ ವಿಶೇಷ ದಿನದಂದು ನಟನನ್ನು ನೋಡಲು ಮತ್ತು ಅವರಿಗೆ ಶುಭಹಾರೈಸಲು ಅಭಿಮಾನಿಗಳ ದಂಡೇ ಅವರ ಮನೆಯ ಹೊರಗೆ ಜಮಾಯಿಸಿತ್ತು. ಫ್ಯಾನ್ಸ್​​ ಪ್ರೀತಿಗೆ ಮನಸೋತು ಅಲ್ಲು ಅರ್ಜುನ್​​ ಹಲವರಿಗೆ ಹೈಫೈವ್​​ ನೀಡಿ ಖುಷಿ ಪಡಿಸಿದ್ದಾರೆ.

ಪ್ರತಿ ವರ್ಷ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಅವರ ಮನೆಯ ಹೊರಗೆ ಕಾಯುತ್ತಾರೆ. ಈ ವರ್ಷವೂ ಸಹ ಫ್ಯಾನ್ಸ್​​​ ಆಸೆಯನ್ನು ನಟ ಅಲ್ಲು ಅರ್ಜುನ್​ ನಿರಾಶೆಗೊಳ್ಳಲಿಲ್ಲ. ನಟನನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳನ್ನು ಭೇಟಿ ಮಾಡಲು ಕೆಲವು ನಿಮಿಷಗಳ ಕಾಲ ಮನೆಯಿಂದ ಹೊರಬಂದು ಅಲ್ಲು ಅರ್ಜುನ್​ ಅಭಿಮಾನಿಗಳ ಪ್ರೀತಿ ಮತ್ತು ಶುಭಾಶಯಗಳಿಗೆ ಕೈಮುಗಿದು ಧನ್ಯವಾದ ಹೇಳಿದರು. ಕೆಲವು ಉತ್ಸಾಹಿ ಅಭಿಮಾನಿಗಳಿಗೆ ಅವರು ಹೈ-ಫೈವ್ ಕೂಡ ನೀಡಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿರ್ದೇಶಕ ಅಟ್ಲೀ ಅವರ ಮುಂಬರುವ ಚಿತ್ರದ ಬಗ್ಗೆ ವಿಶೇಷ ಘೋಷಣೆಯನ್ನು ಮಾಡುವ ಮೂಲಕ ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ತಮಿಳು ಸ್ಟಾರ್ ನಿರ್ದೇಶಕ ಅಟ್ಲೀ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಸದ್ಯ ಸಿನಿಮಾಕ್ಕೆ AA22 x A6 ಎಂದು ಶೀರ್ಷಿಕೆ ಇಡಲಾಗಿದೆ. ಅಲ್ಲು ಅರ್ಜುನ್ ಕೊನೆಯ ಬಾರಿಗೆ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಚಿತ್ರದಲ್ಲಿ ಕಾಣಿಸಿಕೊಂಡರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net