

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಮ್ನ ರಕ್ತೇಶ್ವರಿ ಮತ್ತು ಗುಳಿಗ ದೈವದ ಕಟ್ಟೆ ನವೀಕರಣ ಮತ್ತು ನೂತನ ಛಾವಣಿ ಅರ್ಪಣೆ, ಕ್ಷೇತ್ರದ ಜಾತ್ರೋತ್ಸವದ ಸಂದರ್ಭ ಕ್ಷೇತ್ರದ ಪೀಠಾಧೀಶ 1008 ಮಹಾಮಂಡಲೇಶ್ವರ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಪುನಃಪ್ರತಿಷ್ಠಾಪನೆ, ಕಲಶಾಭಿಷೇಕ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ದೈವದ ನೂತನ ಛಾವಣಿ, ಕಟ್ಟೆಯ ನವೀಕರಣದ ಸೇವಾಕರ್ತರಾಗಿ ಕನ್ಯಾಡಿ ಶ್ರೀ ಗಣೇಶ್ ಪೈಂಟಿಂಗ್ ಮತ್ತು ಶ್ರೀ ಗಣೇಶ್ ಲಾಡ್ಜ್ ಮಾಲೀಕ ರವೀಂದ್ರ ಪೂಜಾರಿ ಆರ್ಲ ಸಹಕರಿಸಿದರು. ಕಾಮಗಾರಿ ನೆರವೇರಿಸಿದವರನ್ನು ಸ್ವಾಮೀಜಿ ಗೌರವಿಸಿದರು. ಗುರುದೇವ ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್, ವೀಣಾ ರವೀಂದ್ರ ಪೂಜಾರಿ, ದಯಾನಂದ ಪಿ.ಬೆಳಾಲು, ಜಾರಪ್ಪ ಪೂಜಾರಿ, ಬೆಳಾಲು ಧರ್ಮಣ ಗೌಡ, ಅರ್ಚಕರು, ಸಿಬ್ಬಂದಿ ಉಪಸ್ಥಿತರಿದ್ದರು.