More

    ಆಸ್ಪತ್ರೆಯಲ್ಲೇ ಹೀರೋ ಪೋಸ್​ ಕೊಟ್ಟ ನೃತ್ಯ ನಿರ್ದೇಶಕ ರೆಮೋ

    ಮುಂಬೈ: ಇತ್ತೀಚೆಗಷ್ಟೇ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ರೆಮೋ ಡಿಸೋಜ ಕ್ರಮೇಣ ಗುಣಮುಖರಾಗುತ್ತಿದ್ದಾರೆ ಎಂದು ಅವರ ಸ್ನೇಹಿತ ಮತ್ತು ನಟ ಆಮೀರ್​ ಅಲಿ ಹೇಳಿಕೊಂಡಿದ್ದು, ಜೊತೆಗೆ ರೆಮೋ ಅವರು ಹೀರೋ ಪೋಸ್​ ಕೊಡುತ್ತಿರುವ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ವಿಜೆ ಚಿತ್ರಾ ಪತಿ ಅರೆಸ್ಟ್​: ಗಂಡನ ವರ್ತನೆಗೆ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದರಾ ಕಲಾವಿದೆ?

    ಕಳೆದ ಶುಕ್ರವಾರ ರೆಮೋ ಹೃದಯಾಘಾತದಿಂದ ಆಸ್ಪತ್ರೆಗೆ ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದಲ್ಲಿ ಬ್ಲಾಕೇಜ್​ ಆಗಿದ್ದ ಕಾರಣ, ಅವರಿಗೆ ಆಂಜಿಯೋಗ್ರಫಿ ಮಾಡಲಾಗಿತ್ತು. ಆ ನಂತರ, ರೆಮೋ ಒಂದೆರೆಡು ದಿನಗಳ ಕಾಲ ಐಸಿಯೂನಲ್ಲಿ ಚಿಕಿತ್ಸೆ ಪಡೆದರು.

    ರೆಮೋ ಗುಣಮುಖರಾಗಲಿ ಎಂದು ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಸೇರಿದಂತೆ ಹಲವು ಗಣ್ಯರು ಪ್ರಾರ್ಥಿಸಿದ್ದರು. ಅದರೆಲ್ಲರ ಪರಿಣಾಮವಾಗಿ ರೆಮೋ ಇದೀಗ ಕ್ರಮೇಣ ಗುಣಮುಖರಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದ್ದಾರೆ.

    ಇದನ್ನೂ ಓದಿ: ‘ಡಿಯರ್ ಸತ್ಯ’ನಿಗೆ ಪವರ್​ಸ್ಟಾರ್ ಸಾಥ್​; ಟ್ರೇಲರ್​ ಬಿಡುಗಡೆ, ಮುಂದಿನ ವರ್ಷಕ್ಕೆ ಸಿನಿಮಾ

    ಈ ಮಧ್ಯೆ, ಆಸ್ಪತ್ರೆಯಲ್ಲಿ ರೆಮೋ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿರುವ ಆಮೀರ್​ ಅಲಿ, ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಫೋಟೊ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ರೆಮೋ ಅವರು ಹೀರೋ ಪೋಸ್​ ಕೊಡುತ್ತಿರುವುದನ್ನು ನೋಡಬಹುದಾಗಿದ್ದು, ಈ ಮೂಲಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಮೀರ್​ ಹೇಳಿದ್ದಾರೆ.

    ಹೆಚ್ಚು ಟ್ವೀಟ್​ ಆದ ಚಿತ್ರಗಳು: ‘ದರ್ಬಾರ್​’ ಹಿಂದಿಕ್ಕಿದ ‘ಕೆಜಿಎಫ್​ 2’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts