ರಾಮಜನ್ಮಭೂಮಿ: ಉತ್ಖನನದಲ್ಲಿ ಪುರಾತನ ಕಾಲದ ದೇವಾಲಯದ ಅವಶೇಷಗಳು ಪತ್ತೆ

Rama
Published on

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ಸ್ಥಳವನ್ನು ಅಗೆಯಲಾಗುತ್ತಿದ್ದು, ಉತ್ಖನನದಲ್ಲಿ ಪ್ರಾಚೀನ ದೇವಾಲಯದ ಅವಶೇಷಗಳು ಮತ್ತು ಶಿಲ್ಪಗಳು ಕಂಡುಬಂದಿವೆ.

ಈ ಮಾಹಿತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಟ್ವೀಟ್ ಮಾಡಿದ್ದಾರೆ. ಉತ್ಖನನದಲ್ಲಿ ಅನೇಕ ಪ್ರತಿಮೆಗಳು ಮತ್ತು ಕಂಬಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ.

ಫೋಟೋಗಳನ್ನು ನೋಡಿದಾಗ, ಈ ಪ್ರತಿಮೆಗಳು ಮತ್ತು ಕಂಬಗಳು ಸಾಕಷ್ಟು ಪುರಾತನ ಕಾಲದವು ಎಂಬುದು ತಿಳಿಯುತ್ತದೆ. ಅಂದಹಾಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2024ರ ಜನವರಿಯಲ್ಲಿ ಭಕ್ತರಿಗಾಗಿ ಗರ್ಭಗುಡಿಯನ್ನು ತೆರೆಯಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಅಂತಿಮಗೊಳಿಸಲಾಗುತ್ತಿದೆ. 2019 ರಲ್ಲಿ ರಾಮ ಮಂದಿರದ ಬಗ್ಗೆ ನಿರ್ಧಾರ ತೆಗೆದುಕೊಂಡಾಗಿನಿಂದ ರಾಮ ನಗರಿ ನಿರಂತರವಾಗಿ ಸುದ್ದಿಯಲ್ಲಿದೆ. ಅಭಿವೃದ್ಧಿ ಯೋಜನೆಗಳ ಕೆಲಸ ನಡೆಯುತ್ತಿದ್ದು, ನಗರದಲ್ಲಿ ದೊಡ್ಡ ವಿಮಾನ ನಿಲ್ದಾಣವೂ ನಿರ್ಮಾಣವಾಗುತ್ತಿದೆ. ದೇವಾಲಯದ ನಿರ್ಮಾಣ ಪ್ರಾರಂಭವಾದ ತಕ್ಷಣ, ಹೆಚ್ಚಿನ ಸಂಖ್ಯೆಯ ರಾಮ ಭಕ್ತರು ಇಲ್ಲಿಗೆ ಬರಲು ಯೋಜಿಸುತ್ತಿದ್ದಾರೆ.

ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಾಲಕಾಲಕ್ಕೆ ದೇವಾಲಯ ನಿರ್ಮಾಣದ ಚಿತ್ರಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net