

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಶಿಷ್ಯರ ಮನಸ್ಸು ಅರಿತು ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಗುರುಗಳು ರಾಘವೇಂದ್ರ ಸ್ವಾಮಿ. ರಾಘವೇಂದ್ರ ಸ್ವಾಮಿಗಳ ಅನುಗ್ರಹ ಇದ್ದರೆ ಯಾವುದನ್ನೂ ಸಾಧಿಸಬಹುದು ಎಂದು ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಹೇಳಿದರು.
ಮಂಜೇಶ್ವರ ಹೊಸಬೆಟ್ಟು ಜಮ್ಮದ ಮನೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಮಂಜೇಶ್ವರದ ರಾಯರ ಭಕ್ತರ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹೈಮೇಶ್ ಬಿ.ಎಂ.ಕಟ್ಟೆಬಜಾರ್, ಜಮ್ಮದ ಮನೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ರಾಮಚಂದ್ರ ರಾವ್, ಸತೀಶ್ ಅಡಪ, ಡಾ.ಮುರಳಿ ಮೋಹನ್ ಚೂಂತಾರ್, ಡಾ.ರಾಜಶ್ರೀ ಚೂಂತಾರ್, ಲಕ್ಷಣ ಆಚಾರ್ಯ, ದಾಮೋದರ ಆಚಾರ್ಯ, ಲಕ್ಷ್ಮೀ ನಾರಾಯಣ ಆಚಾರ್ಯ, ಎಚ್.ಕೇಶವ ಆಚಾರ್ಯ, ರಾಮಕೃಷ್ಣ ಆಚಾರ್ಯ, ಕಿರಣ್ ಬಿ.ಎಂ., ಹರೀಶ್ ಆಚಾರ್ಯ, ನವೀನ್ ಅಡಪ, ರಾಕೇಶ್ ಕುಲಾಲ್, ಅಕ್ಷಯ್ ಶೆಟ್ಟಿ, ಜಗದೀಶ್ ಆಚಾರ್ಯ, ಪುರುಷೋತ್ತಮ, ವಾಗೇಶ ಆಚಾರ್ಯ, ದೀಪಕ್ ರಾಜ್, ಸಂತೋಷ್, ಚಂದ್ರೆಶ್, ಜೀವನ್, ಪವನ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ರತನ್ ಕುಮಾರ್ ಸ್ವಾಗತಿಸಿದರು. ರಾಜೇಶ್ ಕಡಂಬಾರು ವಂದಿಸಿದರು. ಮಂಗಳೂರಿನ ಯಾದವ ಶರ್ಮಾ ನೇತೃತ್ವದಲ್ಲಿ ತಿರುಮಲೇಶ ಆಚಾರ್ಯರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.