ಕಡಬ ಮೊಸರು ಕುಡಿಕೆ ಉತ್ಸವ ಸಂಪನ್ನ : ಶೋಭಾಯಾತ್ರೆ, ಧಾರ್ಮಿಕ ಸಭೆ

madake
Published on

ಕಡಬ: ವಿಹಿಂಪ ಬಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡ ವತಿಯಿಂದ ವಿ.ಹಿಂ.ಪ ಸ್ಥಾಪನಾ ದಿನಾಚರಣೆಯ ಅಂಗವಾಗಿ ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ, ಧಾರ್ಮಿಕ ಸಭೆ ಭಾನುವಾರ ನಡೆಯಿತು.

ಬೆಳಗ್ಗೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ್ ಕೆ. ದ್ಘಾಟಿಸಿದರು. ಕಡಬ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ನೈಾಕ್ ಮೇಲಿನಮನೆ ಅತಿಥಿಯಾಗಿದ್ದರು. ವಿಹಿಂಪ ಕಡಬ ಪ್ರಖಂಡ ಗೌರವಾಧ್ಯಕ್ಷ ವಾಸುದೇವ ಭಟ್ ಕಡ್ಯ, ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ, ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ, ಮಾತೃಶಕ್ತಿ ಸಂಯೋಜಕಿ ದೇವಕಿ ಪೂವಳ, ಮುಖಂಡರಾದ ಪ್ರಮೋದ್ ರೈ ನಂದುಗುರಿ, ಆಶ್ವಿತ್ ಕಂಡಿಗ, ಗೀತಾ ಕೇವಳ, ಕಿಶನ್ ಕುಮಾರ್ ರೈ ಪೆರಿಯಡ್ಕ ಮೊದಲಾದವರು ಇದ್ದರು. ವೀಣಾ ಕೊಲ್ಲೆಸಾಗು ಸ್ವಾಗತಿಸಿದರು. ಸವಿತಾ ವಂದಿಸಿದರು. ಮೈನಾ ರಾಜೇಶ್ ನಿರೂಪಿಸಿದರು.

ಬಳಿಕ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ತಂಡಗಳಿಂದ ಭಜನಾ ಕಾರ್ಯಕ್ರಮ, ಸಾರ್ವಜನಿಕರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ವರ್ಧಾ ಕಾರ್ಯಕ್ರಮ ನಡೆಯಿತು.

ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೂಡೂರು ರಾಮಚಂದ್ರ ಭಟ್ ವಹಿಸಿದ್ದರು. ವಿ.ಹಿಂ.ಪ ಕ್ಷೇತ್ರಿಯ ಧರ್ಮಪ್ರಸಾರ ಪ್ರಮುಖ್ ಸೂರ್ಯನಾರಾಯಣ ದಿಕ್ಸೂಚಿ ಭಾಷಣ ಮಾಡಿದರು. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಪ್ರಮುಖರಾದ ತಿಲಕ್ ರೈ ಮುಂಡ್ರಾಡಿ ಗುತ್ತು, ಉದ್ಯಮಿಗಳಾದ ರಂಜಿತ್ ಪದಕಂಡ, ಪ್ರಸಾದ್ ಎನ್.ಕೆ, ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಪ್ರಮುಖ್ ರಾಮಚರಣ್ ರೈ, ಪ್ರಗತಿಪರ ಕೃಷಿಕ ಜನಾರ್ದನ ಗೌಡ ಪುತ್ತಿಲ, ಕಿನ್ನಿಗ ಆರ್. ರಾಮಕುಂಜ, ವಿಹಿಂಪ ಜಿಲ್ಲಾ ಸಹಸಂಚಾಲಕ ಶ್ರೀಧರ ತೆಂಕಿಲ, ಮಾತೃಶಕ್ತಿ ಪ್ರಮುಖರಾದ ಗೀತಾ ಕೇವಳ, ಪ್ರೇಮಲತಾ, ದೇವಕಿ ಪೂವಲ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತನಿಯಪ್ಪ ಕೊಡಿಕಜೆ, ಶರತ್ ರಾವ್ ಬಿಳಿನೆಲೆ ಅವರನ್ನು ಸನ್ಮಾನಿಸಲಾಯಿತು. ಅಟ್ಟಿ ಮಡಕೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ವಿತ್ ಕಂಡಿಗ ಸ್ವಾಗತಿಸಿದರು. ಜಯಂತ ಕಲ್ಲುಗುಡ್ಡೆ ವಂದಿಸಿದರು. ಪ್ರಮೀಳಾ ಲೋಕೇಶ್ ನಿರೂಪಿಸಿದರು.

ಗಮನ ಸೆಳೆದ ಪ್ರತಿಕೃತಿಗಳು

ಮಧ್ಯಾಹ್ನ ಸಂತೆಕಟ್ಟೆ ಬಳಿಯಿಂದ ಬಸ್ ನಿಲ್ದಾಣದವರೆಗೆ ರಸ್ತೆಯುದ್ದಕ್ಕೂ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಪ್ರದರ್ಶನ ನಡೆಯಿತು. ಶೋಭಾಯಾತ್ರೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿನ್ನಿಗ ಆರ್.ರಾಮಕುಂಜ ನೆರವೇರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿದರು. ವೀರಗಾಸೆ ಕುಣಿತ, ದೈತ್ಯ ಗಾತ್ರದ ಆನೆ, ಸಿಂಹಗಳ ಪ್ರತಿಕೃತಿ, ರುದ್ರ ವೇಷಧಾರಿ, ಬೃಹತ್ ಬೊಂಬೆಗಳು, ಆಕರ್ಷಕ ನಾಸಿಕ್ ಬ್ಯಾಂಡ್ ರಂಜನೆ ನೀಡಿತು. ಅಟ್ಟಿ ಮಡಕೆ ಪಂದ್ಯಾಟವನ್ನು ನಿರೂಪಕ ಸುರೇಶ್ ಪಡಿಪಂಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net