ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕರ ಮಂಡಳಿಯು ಸೆಪ್ಟೆಂಬರ್ ಐದನೇ ತಾರೀಕಿನ ಗುರುವಾರದಂದು 1:1ರ ಅನುಪಾತದಲ್ಲಿ ಬೋನಸ್ ಷೇರುಗಳ ವಿತರಣೆ ಮಾಡುವುದಕ್ಕೆ ಅನುಮೋದನೆ ನೀಡಿದೆ. ಅಂದರೆ 1 (ಒಂದು) ಸಂಪೂರ್ಣವಾಗಿ ಪಾವತಿಸಿದ ಈಕ್ವಿಟಿ ಷೇರನ್ನು ಹೊಂದಿರುವ ಪ್ರತಿ ಷೇರುದಾರರೂ ರೂ. 10 ಮುಖಬೆಲೆಯ ಷೇರನ್ನು ಪಡೆದುಕೊಳ್ಳುತ್ತಾರೆ. ಈ ವಿತರಣೆಗಾಗಿ ಅರ್ಹತೆ ಎಂಬಂತೆ ಗಣನೆಗೆ ತೆಗೆದುಕೊಳ್ಳುವುದು ದಾಖಲೆ ದಿನಾಂಕದಂದು (ರೆಕಾರ್ಡ್ ಡೇಟ್) 1 (ಒಂದು) ಸಂಪೂರ್ಣವಾಗಿ ಪಾವತಿಸಿದ ಈಕ್ವಿಟಿ ಷೇರನ್ನು ಹೊಂದಿರಬೇಕು. ಅಂದ ಹಾಗೆ ಇದಕ್ಕಾಗಿ ದಾಖಲೆ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.
ಭಾರತೀಯ ಷೇರು ಮಾರುಕಟ್ಟೆಯಲ್ಲಿಯೇ ಇದು ಬೋನಸ್ ಈಕ್ವಿಟಿ ಷೇರುಗಳ ಅತಿದೊಡ್ಡ ವಿತರಣೆಯಾಗಲಿದೆ. ಬೋನಸ್ ಷೇರುಗಳ ವಿತರಣೆ ಮತ್ತು ಲಿಸ್ಟಿಂಗ್ ಭಾರತದಲ್ಲಿ ಮುಂಬರುವ ಹಬ್ಬದ ಋತುವಿನೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಎಲ್ಲ ಷೇರುದಾರರಿಗೆ ಆರಂಭಿಕ ದೀಪಾವಳಿ ಉಡುಗೊರೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಐಪಿಒ ನಂತರ ಇದು ಆರನೇ ಬೋನಸ್ ನೀಡಿಕೆಯಾಗಿದೆ ಮತ್ತು ಈ ದಶಕದಲ್ಲಿ ಎರಡನೆಯದಾಗಿದೆ. 2017 ರಿಂದ 2027ರ ವರೆಗಿನ ದಶಕದ ಅವಧಿಯಲ್ಲಿ ಷೇರುದಾರರಿಗೆ ಅತ್ಯುತ್ತಮ ರಿಟರ್ನ್ಸ್ ನೀಡುವ ರಿಲಯನ್ಸ್‌ನ ನಿರಂತರ ಬದ್ಧತೆಗೆ ಬೋನಸ್ ವಿತರಣೆಯು ಸಾಕ್ಷಿಯಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಬಳಿಕ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ರವೀಂದ್ರ ಜಡೇಜಾ
ಈ ಹಿಂದೆ ಕಂಪನಿಯು ನೀಡಿದ ಬೋನಸ್ ಹಾಗೂ ಹಕ್ಕುಗಳ ಷೇರು ಮತ್ತು ಇತರ ಹಂಚಿಕೆ ವಿವರ ಹೀಗಿದೆ:
- • 2017ರಲ್ಲಿ ರಿಲಯನ್ಸ್ 1:1ರ ಅನುಪಾತದಲ್ಲಿ ಬೋನಸ್ ಷೇರು ವಿತರಣೆ
- • 2020ರಲ್ಲಿ ಹಕ್ಕುಗಳ ಷೇರು ವಿತರಣೆ, ಅಲ್ಲಿಂದ ಷೇರುದಾರರ ಹೂಡಿಕೆ ಈಗಾಗಲೇ 2.5 ಪಟ್ಟು ಹೆಚ್ಚಳ
- • 2023ರ ಜುಲೈನಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ವಿಭಜನೆ, ಇದು ಲಿಸ್ಟಿಂಗ್ ಬೆಲೆಗಿಂತ ಶೇ 35ರಷ್ಟು ಹೆಚ್ಚಳ
ರಿಲಯನ್ಸ್ ಮುಂಬರುವ ವರ್ಷಗಳಲ್ಲಿ ‘ವಿ ಕೇರ್’ ತತ್ವದ ನಿಜವಾದ ಸ್ಪೂರ್ತಿಯಲ್ಲಿ ತನ್ನ ಎಲ್ಲ ಪಾಲುದಾರರಿಗೆ ಸರ್ವತೋಮುಖ ಮೌಲ್ಯವನ್ನು ದೊರಕಿಸುವ ತನ್ನ ಧ್ಯೇಯಕ್ಕೆ ಬದ್ಧವಾಗಿದೆ.