ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಿಲಯನ್ಸ್ ಫೌಂಡೇಶನ್ ಕ್ರೀಡಾಪಟುಗಳಿಂದ ಇತಿಹಾಸ ಸೃಷ್ಟಿ; 20 ಚಿನ್ನ ಸಹಿತ 43 ಪದಕ ಗೆಲುವಿನ ಸಾಧನೆ

blank

ಡೆಹ್ರಾಡೂನ್:ರಿಲಯನ್ಸ್ ಫೌಂಡೇಶನ್ ಕ್ರೀಡಾಪಟುಗಳು 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ 43 ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 20 ಚಿನ್ನ, 16ಬೆಳ್ಳಿ ಮತ್ತು 7 ಕಂಚಿನ ಪದಕಗಳು ಸೇರಿವೆ. ಅಥ್ಲೆಟಿಕ್ಸ್‌ನಲ್ಲಿ ರಿಲಯನ್ಸ್ ಫೌಂಡೇಶನ್ ಅಥ್ಲೀಟ್‌ಗಳು ಪ್ರಾಬಲ್ಯವನ್ನು ಸಾಧಿಸಿ ಒಟ್ಟು 21 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅನಿಮೇಶ್ ಕುಜೂರ್ 100 ಮೀ, 200 ಮೀ ಮತ್ತು 4×100 ಮೀ ರಿಲೇಯಲ್ಲಿ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ಟಾರ್ ಅಥ್ಲೀಟ್ ಆಗಿ ಹೊರಹೊಮ್ಮಿದರು.

 ಒಲಿಂಪಿಯನ್ ಅಥ್ಲೀಟ್‌ ಜ್ಯೋತಿ ಯರ್ರಾಜಿ 100 ಮೀಟರ್ ಹರ್ಡಲ್ಸ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ವರ್ಣ ಗೆಲುವಿನ ಓಟವನ್ನು ಮುಂದುವರಿಸಿದರು. ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ ಶಿರ್ಸೆ ಪುರುಷರ 110 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಪದಕ ಸಾಧಕರ ಪಟ್ಟಿಗೆ ಸೇರ್ಪಡೆಯಾದರು.

ಜ್ಯೋತಿ ಮತ್ತು ತೇಜಸ್ ಇಬ್ಬರೂ ಕಳೆದ ಮೂರು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸತತವಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಸಾವನ್ 5000 ಮೀ ಮತ್ತು 10,000 ಮೀ ಓಟದಲ್ಲಿ ಚಿನ್ನದ ಪದಕ, ಕಿರಣ್ ಮ್ಹಾತ್ರೆ 10,000 ಮೀ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಕಿರಣ್ 2025ರಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದಿದ್ದಾರೆ.

 ರಿಲಯನ್ಸ್ ಫೌಂಡೇಶನ್ ಕ್ರೀಡಾಪಟುಗಳಿಗೆ ಇದು ಅತ್ಯಂತ ಯಶಸ್ವಿ ರಾಷ್ಟ್ರೀಯ ಕ್ರೀಡಾಕೂಟವಾಗಿದ್ದು, ಅಥ್ಲೆಟಿಕ್ಸ್‌ನಲ್ಲಿ ನಾವು ಏಳು ವೈಯಕ್ತಿಕ ಅತ್ಯುತ್ತಮ ಸಾಧನೆಗಳನ್ನು ಸಾಧಿಸಿದ್ದೇವೆ ಮತ್ತು ಹಲವಾರು ಹೊಸ ದಾಖಲೆಗಳನ್ನು ರಚಿಸಿದ್ದೇವೆ. ನಮ್ಮ ಅಥ್ಲೆಟಿಕ್ಸ್ ತಂಡವು 12 ಚಿನ್ನದ ಪದಕಗಳನ್ನು ಗೆದ್ದಿದೆ. ಇದು ಮುಂಬರುವ ಋತುವಿನಲ್ಲಿ ಅವರಿಗೆ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಒಡಿಶಾದ ರಿಲಯನ್ಸ್ ಫೌಂಡೇಶನ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಮುಖ್ಯ ತರಬೇತುದಾರ ಮಾರ್ಟಿನ್ ಓವೆನ್ಸ್ ಹೇಳಿದರು.

ಮೌಮಿತಾ ಮಂಡಲ್ ಲಾಂಗ್ ಜಂಪ್‌ನಲ್ಲಿ ಚಿನ್ನದ ಪದಕ ಮತ್ತು 100 ಮೀಟರ್ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸತ್ಯನ್ ಜ್ಞಾನಶೇಖರನ್ ಟೇಬಲ್ ಟೆನಿಸ್ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ, ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಮತ್ತು ಪುರುಷರ ಟೀಮ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಶೂಟರ್ ಗನಿಮತ್ ಸೆಖೋನ್ ಸ್ಕೀಟ್‌ನಲ್ಲಿ ಚಿನ್ನದ ಪದಕ ಗೆದ್ದರು, ಅರ್ಹತಾ ಸುತ್ತಿನಲ್ಲಿ 124 ಅಂಕಗಳೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಅನುಭವಿ ಶೂಟರ್ ಗುರುಪ್ರೀತ್ ಸಿಂಗ್ 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಬೆಳ್ಳಿ ಪದಕ ಮತ್ತು 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ನೀರಜ್ ಕುಮಾರ್ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರೆ, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪಾಲಕ್ ಗುಲಿಯಾ ಬೆಳ್ಳಿ ಪದಕ ಗೆದ್ದರು.

ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಆಶಿ ಚೌಕ್ಸೆ ವಿಶ್ವದಾಖಲೆಯನ್ನು ಮುರಿದರು. ಬ್ಯಾಡ್ಮಿಂಟನ್ ಯುವತಾರೆ ಉನ್ನತಿ ಹೂಡಾ ಹರಿಯಾಣದ ಮಹಿಳಾ ತಂಡ ಚಾಂಪಿಯನ್‌ಶಿಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಳೆದ ಆವೃತ್ತಿಯಲ್ಲಿ ಚಿನ್ನದ ಪದಕದ ನಂತರ ಅನುಪಮಾ ಉಪಾಧ್ಯಾಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಈ ಬಾರಿ ಬೆಳ್ಳಿ ಪದಕ ಗೆದ್ದರು.

ಆರ್ಚರಿಯಲ್ಲಿ ಗೋಲ್ಡಿ ಮಿಶ್ರಾ ಪುರುಷರ ರಿಕರ್ವ್ ಟೀಮ್ ಈವೆಂಟ್‌ನಲ್ಲಿ ಚಿನ್ನ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದರೆ, ಪುರುಷರ ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ ಜುಯೆಲ್ ಸರ್ಕಾರ್ ಚಿನ್ನ ಗೆಲ್ಲುವ ಮೂಲಕ ತನ್ನ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನ ನಂತರ ವಾಪಸಾದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಉನ್ನತ ದರ್ಜೆಯ ಪ್ರದರ್ಶನದೊಂದಿಗೆ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು.

ಚಾಂಪಿಯನ್ಸ್​ ಟ್ರೋಫಿಯಿಂದ ಬುಮ್ರಾ ಔಟ್​; ಜೈಸ್ವಾಲ್​ ಬದಲಿಗೆ 5ನೇ ಸ್ಪಿನ್ನರ್​ಗೆ ಸ್ಥಾನ!

TAGGED:
Share This Article

ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು… Coconut water

Coconut water : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ಮನೆಯಿಂದ ಹೊರಬಂದರೆ ಸಾಕು ಸೂರ್ಯನ…

ಹಣದ ಸಮಸ್ಯೆಗಳಿಂದ ಮುಕ್ತಿ ಪಡೆಯಲು 1 ದಿನ: ಈ ದಿವಸ ನೀವಿದನ್ನು ಮಾಡಿದ್ರೆ ದುಡ್ಡಿನ ತೊಂದರೆ ಮಾಯ! Money Problems

Money Problems : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು…

ಬೇಸಿಗೆಯ ಆರೋಗ್ಯಕ್ಕಾಗಿ ಇವುಗಳಿಗೆ ವಿದಾಯ ಹೇಳಿ! ಇಲ್ಲದಿದ್ದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ Summer Foods

Summer Foods : ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆದ್ದರಿಂದ ದೇಹವನ್ನು…