

ಮೂಲ್ಕಿ: ಪ್ರಿಯದರ್ಶಿನಿ ಸೊಸೈಟಿ ಅತ್ಯಲ್ಪ ಅವಧಿಯಲ್ಲಿ ಉತ್ತಮ ಸಾಧನೆಗೈದು ಕರಾವಳಿ ಜಿಲ್ಲೆಯಲ್ಲಿ ಜನಮನ್ನಣೆ ಗಳಿಸುತ್ತಿದೆ. ಇಂಥ ಸೇವೆ ಸದಾ ಮುಂದುವರಿದು ಗ್ರಾಮೀಣ ಪ್ರದೇಶದ ಜನರಿಗೆ ಇನ್ನಷ್ಟು ಉದ್ಯೋಗಾವಕಾಶ ದೊರೆಯಲಿ ಎಂದು ಬೆಳಗಾವಿ ಶ್ರೀಕ್ಷೇತ್ರ ಮಹಾಕಾಳಿ ಮಹಾಸಂಸ್ಥಾನ ಶ್ರೀ ನಿಪ್ಪಾಣಿ ಪೀಠದ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ ಹೇಳಿದರು.
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಬಗ್ಗೆ ಮಾಹಿತಿ ಪಡೆದು ಆಶೀರ್ವಚನ ನೀಡಿದರು. ಸ್ವಾಮೀಜಿ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ್ ಬೆರ್ನಾರ್ಡ್ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕ ಎಂ.ಗೌತಮ್ ಜೈನ್, ಶಾಖಾ ಪ್ರಬಂಧಕರಾದ ಅಕ್ಷತಾ ಶೆಟ್ಟಿ, ಮೋಹನ್ ದಾಸ್ ಪೂಜಾರಿ, ಅಂಜಲಿ ದೇವಾಡಿಗ ಮೊದಲಾದವರಿದ್ದರು.
ಪ್ರಥಮ ಕಚೇರಿ ಸಿಬ್ಬಂದಿ ಲೋಲಾಕ್ಷಿ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು.