30 ನಿಮಿಷದಲ್ಲಿ 900 ಕೋಟಿ ರೂ. ನಷ್ಟ ಅನುಭವಿಸಿದ ರೇಖಾ ಜುಂಜುನ್ವಾಲಾ! | Rekha Jhunjhunwala

dk - 2025-07-08T204414.159
Published on

Rekha Jhunjhunwala: ಟೈಟನ್​ ಕಂಪನಿ ಷೇರುಗಳು ಮಂಗಳವಾರ ದಿಢೀರ್​ ಕುಸಿತ ಹಿನ್ನೆಲೆ ಭಾರತದ ಶ್ರೀಮಂತ ಮಹಿಳೆ ಹಾಗೂ ಉದ್ಯಮಿ ರೇಖಾ ಜುಂಜುನ್ವಾಲಾ 900 ರೂ. ನಷ್ಟ ಅನುಭವಿಸಿದ್ದಾರೆ.

ಟೈಟಾನ್‌ ಕಂಪನಿ ಷೇರುಗಳಲ್ಲಿ ರೇಖಾ ಜುಂಜುನ್ವಾಲ ಶೇ. 5.15 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಟೈಟಾನ್ ಷೇರುಗಳ 5.52 ರಷ್ಟು ಕುಸಿತದೊಂದಿಗೆ, ಜುಂಜುನ್‌ವಾಲಾ ಅವರಿಗೆ ತೀವ್ರ ಹೊಡೆತ ಬಿದ್ದಿದೆ. ಷೇರುಗಳ ಕುಸಿತದಿಂದಾಗಿ ಅವರ ಟೈಟಾನ್ ಷೇರುಗಳ ಮೌಲ್ಯ ಸುಮಾರು 15,842 ಕೋಟಿ ರೂ.ಗೆ ಇಳಿದಿದೆ.

ಟೈಟಾನ್ ಷೇರು ಮಂಗಳವಾರ ಶೇ.6.17 ರಷ್ಟು ಕುಸಿತದೊಂದಿಗೆ 3,440 ರೂ ದರದಲ್ಲಿ ವಹಿವಾಟು ಮುಕ್ತಾಯಗೊಂಡಿತು. ಈ ತೀವ್ರ ಕುಸಿತದಿಂದ ಕಂಪನಿಯ ಮಾರುಕಟ್ಟೆ ಬಂಡವಾಳ 3.05 ಲಕ್ಷ ಕೋಟಿಗೆ ಇಳಿದಿದೆ.

ಟಾಟಾ ಸಮೂಹ ಕಂಪನಿಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ದಿವಂಗತ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಅವರು ಒಟ್ಟು 72.885 ಕೋಟಿ ರೂ. ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net