

ಕೋಟ: ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಸುವರ್ಣ ಎಂಟಪ್ರೈಸ್, ಕೋಟ ಸಮುದ್ಯತಾ ಗ್ರೂಪ್ಸ್, ಮಣೂರು ಫ್ರೆಂಡ್ಸ್, ಕೋಟ ಜೆಸಿಐ ಸಿನಿಯರ್ ಲಿಜನ್ ಸಹಯೋಗದೊಂದಿಗೆ ಮೂರು ತಿಂಗಳ ಹಸಿರುಜೀವ 269ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮ ಹಸಿರುಜೀವ ಅಭಿಯಾನದಲ್ಲಿ ಕೋಟ, ಸಾಲಿಗ್ರಾಮ, ಗುಂಡ್ಮಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಟ್ಟ ಗಿಡಗಳಿಗೆ ಕಾಯಕಲ್ಪ ನೀಡುವ ಕಾರ್ಯಕ್ರಮ ಭಾನುವಾರ ಜರುಗಿತು.
ವಕೀಲ ರಾಜೇಶ್ ಬಾರಿಕೆರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ, ಪಂಚವರ್ಣದ ಉಪಾಧ್ಯಕ್ಷರಾದ ದಿನೇಶ್ ಆಚಾರ್, ಸಂತೋಷ್ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್ ಮತ್ತಿತರರು ಇದ್ದರು.