More

    ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ, ಕಡಿವಾಣಕ್ಕೆ ಮನವಿ

    ಮಸ್ಕಿ: ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಕಡಿವಾಣ ಹಾಕಬೇಕು ಎಂದು ತಾಲೂಕು ದಲಿತ ವಿದ್ಯಾರ್ಥಿ ಸಂಘಟನೆಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಂತರ ಶಿರಸ್ತೇದಾರ್ ವಿಜಯಕುಮಾರ ಸಜ್ಜನ್‌ಗೆ ಮನವಿ ಸಲ್ಲಿಸಲಾಯಿತು.

    ಇದನ್ನೂ ಓದಿ: ಡೊನೇಷನ್, ಶುಲ್ಕ ಹಾವಳಿಗೆ ಕಡಿವಾಣ, ಫೀ ಕೇಳುವ ಶಾಲೆ ಪರವಾನಗಿ ರದ್ದು: ಸಚಿವ ಸುರೇಶ್​ಕುಮಾರ್

    ತಾಲೂಕು ಅಧ್ಯಕ್ಷ ಮೌನೇಶ ತುಗ್ಗಲದಿನ್ನಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆ ಹಾಗೂ ಕಾನೂನು ನಿಯಮ ಉಲ್ಲಂಘಿಸಿ ಡೊನೇಷನ್ ಪಡೆಯುತ್ತಿವೆ. ಶಿಕ್ಷಣ ಇಲಾಖೆ ಇದೆಲ್ಲವನ್ನು ನೋಡಿಯೂ ನೋಡದ ಹಾಗೆ ವರ್ತಿಸುತ್ತಿದೆ ಎಂದು ದೂರಿದರು.

    1986ರ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಡೇರಾ ಹಾಗೂ ಡೊನೇಷನ್ ನಿಯಂತ್ರಣ ಸಮಿತಿಗಳು ಅಸ್ತಿತ್ವದಲ್ಲಿರಬೇಕು. ಇವು ಕಾಲಕಾಲಕ್ಕೆ ಪಾಲಕರಿಗೆ ಮತ್ತು ಸಂಘಟನೆಗಳಿಗೆ ಮಾಹಿತಿ ನೀಡಬೇಕು. ಆದರೆ ಡೇರಾ ಸಮಿತಿ ತಾಲೂಕಿನಲ್ಲಿ ಹೆಸರಿಗಷ್ಟೇ ಇದೆ. ಯಾವುದೇ ರೀತಿಯ ಕಾರ್ಯಚಟುವಟಿಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಕೂಡಲೇ ಎಲ್ಲ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ಡೊನೇಷನ್ ಹಾವಳಿ ತಡೆಗೆ ಮುಂದಾಗಬೇಕು. ಶಾಲಾ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಶುಲ್ಕದ ವಿವರ ಹಾಕುವಂತೆ ಸೂಚಿಸಬೇಕು. ಶಿಕ್ಷಣ ಇಲಾಖೆ ನಿಮಯ ಮೀರಿದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೌನೇಶ ತುಗ್ಗಲದಿನ್ನಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts