More

    `ಶಾಕಿನಿ ಡಾಕಿನಿ’ಯಾದ ರೆಜೀನಾ-ನಿವೇತಾ

    ಹೈದರಾಬಾದ್: `ಎವರು’ ಚಿತ್ರದ ಯಶಸ್ಸಿನ ನಂತರ ರೆಜೀನಾಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಇದೀಗ, ಸುಧೀರ್ ವರ್ಮಾ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ರೆಜೀನಾ ನಟಿಸುತ್ತಿದ್ದಾರೆ. `ಎವರು’ ಚಿತ್ರವು ಸ್ಪಾನಿಶ್ ಚಿತ್ರ `ದಿ ಇನ್ವಿಸಿಬಲ್ ಗೆಸ್ಟ್’ನ ರೀಮೇಕ್ ಆದರೆ, ಈ ಚಿತ್ರವು ಕೊರಿಯಾದ `ಮಿಡ್‌ನೈಟ್ ರನ್ನರ್ಸ್​’ ಎಂಬ ಚಿತ್ರದ ರೀಮೇಕ್ ಅಂತೆ.

    ಇದನ್ನೂ ಓದಿ: ಎಲ್ಲ ಚಿತ್ರಗಳನ್ನೂ ಮುಂದಕ್ಕೆ ಹಾಕಿದರಂತೆ ಚಿರಂಜೀವಿ … ಯಾಕೆ?

    ಮೂಲ ಚಿತ್ರದಲ್ಲಿ ಇಬ್ಬರು ನಾಯಕರು ಮತ್ತು ಒಬ್ಬ ನಾಯಕಿ ಇದ್ದರು. ಇಲ್ಲಿನ ನೇಟಿವಿಟಿಗೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ತೆಲುಗು ಚಿತ್ರದಲ್ಲಿ ಇಬ್ಬರು ನಾಯಕರ ಬದಲಾಗಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಒಂದು ಪಾತ್ರವನ್ನು ರೆಜೀನಾ ಮಾಡಿದರೆ, ಇನ್ನೊಂದರಲ್ಲಿ ನಿವೇತಾ ಥಾಮಸ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ `ಶಾಕಿನಿ ಡಾಕಿನಿ’ ಎಂಬ ಹೆಸರನ್ನು ಇಡಲಾಗಿದೆ.

    ಇದನ್ನೂ ಓದಿ: ‘ಕೂ’ ವೇದಿಕೆಗೆ ಕಂಗನಾಳನ್ನು ಕೂಗಿ ಕರೆದರು: ಇನ್ಮುಂದೆ ಇದೇ ನನ್ನ ಸ್ವಂತ ಮನೆ ಎಂದು ಟ್ವಿಟ್ಟರ್​ಗೆ ಟಾಂಗ್ ಕೊಟ್ಟ ಬಾಲಿವುಡ್ ಬೆಡಗಿ!

    ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ರೆಜೀನಾ ಮತ್ತು ನಿವೇತಾ ಇಬ್ಬರೂ ಇಲ್ಲಿ ಟ್ರೈನಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಬ್ಬರು ಟ್ರೈನಿಗಳು ಹೇಗೆ ಒಂದು ದೊಡ್ಡ ಜಾಲವನ್ನು ಬೇಧಿಸುತ್ತಾರೆ ಎಂಬ ಕಥೆ ಇರುವ ಈ ಚಿತ್ರವನ್ನು ಸುರೇಶ್ ಪ್ರೊಡಕ್ಷನ್ಸ್ ಮತ್ತು ಸುನೀತಾ ತಾತಿ ನಿರ್ಮಿಸುತ್ತಿದ್ದಾರೆ. `ಮಿಡ್‌ನೈಟ್ ರನ್ನರ್ಸ್’ ಚಿತ್ರದ ಅಧಿಕೃತ ರೀಮೇಕ್ ಹಕ್ಕುಗಳನ್ನು ಈಗಾಗಲೇ ಪಡೆಯಲಾಗಿದ್ದು, ಬರವಣಿಗೆ ಕೆಲಸ ಮುಗಿಯುತ್ತಾ ಬಂದಿದೆಯಂತೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

    ಮತ್ತೆ ಫೀಲ್ಡಿಗಿಳಿದ ನಟಿ ರಾಗಿಣಿ; ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts