

ಹೈದರಾಬಾದ್: ಎಲ್ಲ ಅಂದುಕೊAಡAತೆ ಆಗಿದ್ದರೆ, ಚಿರಂಜೀವಿ ಅಭಿನಯದ `ಆಚಾರ್ಯ' ಚಿತ್ರವು ಮೇ ೧೩ಕ್ಕೆ ಬಿಡುಗಡೆಯಾಗಬೇಕಿತ್ತು. ಚಿತ್ರವನ್ನು ಅಂದುಕೊAಡ ಸಮಯದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರು. ಆದರೆ, ಕರೊನಾ ಎರಡನೆಯ ಅಲೆಯಿಂದಾಗಿ, ಬಹಳಷ್ಟು ಕಡೆಗಳಲ್ಲಿ ಚಿತ್ರಪ್ರದರ್ಶನ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಗಿದೆ.
ಈ ಮಧ್ಯೆ, ಚಿರಂಜೀವಿ ಅವರು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. `ಆಚಾರ್ಯ' ಅಲ್ಲದೆ, ಚಿರಂಜೀವಿ ಇನ್ನೂ ಎರಡು ಚಿತ್ರಗಳಲ್ಲಿ ನಟಿಸಬೇಕಿತ್ತು. ಒಂದು ಮಲಯಾಳಂನ `ಲೂಸಿಫರ್' ಚಿತ್ರದ ರೀಮೇಕ್ ಆದರೆ, ಎರಡನೆಯದು ತಮಿಳಿನ `ವೇದಾಳಂ' ಚಿತ್ರದ ರೀಮೇಕ್ ಆಗಿತ್ತು. ಈ ಎರಡೂ ಚಿತ್ರಗಳಲ್ಲಿ ಚಿರಂಜೀವಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಷ್ಟೇ ಅಲ್ಲ, ಒಂದರಹಿAದೊAದು ಚಿತ್ರಕ್ಕೆ ಇದೇ ವರ್ಷ ಡೇಟ್ಸ್ ಕೊಟ್ಟಿದ್ದರು. ಎರಡೂ ಚಿತ್ರತಂಡದವರು ಸದ್ದಿಲ್ಲದೆ ಕೂತು ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಚಿರಂಜೀವಿ, ಆ ಎರಡೂ ಚಿತ್ರಗಳನ್ನು ಮುಂದಕ್ಕೆ ಹಾಕಿದ್ದಾರಂತೆ. ಸದ್ಯಕ್ಕೆ ಚಿತ್ರದ ಕೆಲಸಗಳನ್ನು ನಿಲ್ಲಿಸಿಬಿಡಿ ಎಂದು ಹೇಳಿದ್ದಾರಂತೆ.
ಇಷ್ಟಕ್ಕೂ ಚಿರಂಜೀವಿ ಹೀಗೆ ಮಾಡಿದ್ದೇಕೆ ಎಂಬ ಆಶ್ಚರ್ಯ ಎಲ್ಲರಿಗೂ ಆಗಬಹುದು. ಆದರೆ, ಅದಕ್ಕೂ ಕಾರಣಗಳಿವೆ. ಪ್ರಮುಖವಾಗಿ, ಸದ್ಯದ ಮಟ್ಟಿಗೆ ಯಾವಾಗ ಎಲ್ಲವೂ ಸರಿಹೋಗುತ್ತದೆ ಮತ್ತು ಚಿತ್ರಚಟುವಟಿಕೆಗಳು ಯಾವಾಗ ಪ್ರಾರಂಭವಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. `ಆಚಾರ್ಯ' ಚಿತ್ರವನ್ನು ಆಗಸ್ಟ್ಗೆ ಪೋಸ್ಟ್ಪೋನ್ ಮಾಡಲಾಗಿದೆಯಾದರೂ, ಆಗಸ್ಟ್ನಲ್ಲಿ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳುವುದು ಕಷ್ಟ. ಇನ್ನು, ಆ ಚಿತ್ರ ಬಿಡುಗಡೆ ಆದಮೇಲೆ ಬೇರೆ ಚಿತ್ರಗಳು ಶುರುವಾಗಬೇಕು. ಅವೆಲ್ಲ ಯಾವ ಕಾಲಕ್ಕೋ ಗೊತ್ತಿಲ್ಲ. ಹಾಗಾಗಿ, ಸದ್ಯಕ್ಕೆ ಚಿತ್ರಗಳನ್ನು ನಿಲ್ಲಿಸಿಬಿಡಿ ಎಂದು ಹೇಳಿದ್ದಾರಂತೆ ಚಿರಂಜೀವಿ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಏನಾಗುತ್ತದೆ ಎಂದು ನೋಡಿಕೊಂಡು ಮುಂದುವರೆಯೋಣ ಎಂದು ಅವರು ಆಶ್ವಾಸನೆ ನೀಡಿದ್ದಾರಂತೆ.
ಇದನ್ನೂ ಓದಿ: ಸಲ್ಮಾನ್ ಕೆರಿಯರ್ನಲ್ಲೇ ಹೊಸ ದಾಖಲೆ ಬರೆದ `ರಾಧೆ’
ಹಾಗಾಗಿ, ಎರಡೂ ಚಿತ್ರತಂಡದವರು ಬೇರೆ ದಾರಿ ಇಲ್ಲದೆ ತಮ್ಮ ಚಿತ್ರಗಳನ್ನು ಮುಂದಕ್ಕೆ ಹಾಕಿದ್ದಾರಂತೆ. ಹಾಗಾದರೆ, ಚಿರಂಜೀವಿ ಮತ್ತೆ ಬಣ್ಣ ಹಚ್ಚುವುದು ಯಾವಾಗ? ಇದಕ್ಕೆ ಅವರೇ ಉತ್ತರಿಸಬೇಕು.