More

    ಮಚ್​ಲಕ್ಷ್ಮಿ ರೀಷ್ಮಾ; ಬಾಲಿವುಡ್, ಹಾಲಿವುಡ್ ಅಲ್ಲ ‘ಕೆಡಿ’ ಚಿತ್ರಕ್ಕೆ ಕನ್ನಡತಿ ನಾಯಕಿ

    ಬೆಂಗಳೂರು: ಧ್ರುವ ಸರ್ಜಾ ನಟಿಸುತ್ತಿರುವ, ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’. 1970ರ ದಶಕದ ಅಂಡರ್​ವರ್ಲ್ಡ್ ಸುತ್ತ ಚಿತ್ರದ ಕಥೆ ಸುತ್ತಲಿದೆ. ಕೆಡಿ ಅಲಿಯಾಸ್ ಕಾಳಿದಾಸನಾಗಿ ಧ್ರುವ ಸರ್ಜಾ, ಅಣ್ಣಯ್ಯಪ್ಪ ಪಾತ್ರದಲ್ಲಿ ರವಿಚಂದ್ರನ್, ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಹಾಗೂ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಅಧೀರ ಖ್ಯಾತಿಯ ಬಾಲಿವುಡ್ ನಟ ಸಂಜಯ್ ದತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಚಿತ್ರದ ತಾರಾಗಣವೇ ಕುತೂಹಲ ಮೂಡಿಸುವಂತಿದೆ. ಅದರ ಬೆನ್ನಲ್ಲೇ ಇದೀಗ ನಾಯಕಿಯ ಎಂಟ್ರಿಯಾಗಿದೆ.

    ಮಚ್​ಲಕ್ಷ್ಮಿ ಪಾತ್ರದಲ್ಲಿ ‘ಏಕ್​ಲವ್ಯಾ’ ನಟಿ ರೀಷ್ಮಾ ನಾಣಯ್ಯ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಪಾಲಿನ ಚಿತ್ರೀಕರಣ ಪ್ರಾರಂಭವಾಗಿದ್ದು, ‘ಚಿತ್ರ ಮತ್ತು ಪಾತ್ರದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಅಧಿಕೃತವಾಗಿ ಘೋಷಣೆ ಆಗುವವರೆಗೂ ಮೌನವಹಿಸಿ ಎಂದು ಚಿತ್ರತಂಡದವರು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ…’ ಎಂದು ನಗುತ್ತಾರೆ ರೀಷ್ಮಾ.

    ‘‘ಕೆಡಿ’ ಚಿತ್ರಕ್ಕೆ ಬಾಲಿವುಡ್​ನಿಂದಲೋ ಅಥವಾ ಹಾಲಿವುಡ್​ನಿಂದಲೋ ನಾಯಕಿಯನ್ನು ಕರೆತರಬಹುದು ಅಂತಂದುಕೊಂಡಿದ್ದೆ. ಯಾರಿರಬಹುದು ಎಂಬ ಕುತೂಹಲ ನನಗೂ ಇತ್ತು. ಆದರೆ, ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದು ಸರ್​ಪ್ರೖೆಸ್ ಆಯಿತು. ಒಂದು ತಿಂಗಳ ಕಾಲ ವರ್ಕ್​ಶಾಪ್ ಮಾಡಿದ್ದೇನೆ. ಲುಕ್ ಫಿಕ್ಸ್ ಆಗೋಕೇ ತುಂಬ ಬದಲಾವಣೆಗಳನ್ನು ಮಾಡಬೇಕಾಯಿತು. ಇದುವರೆಗೂ ಮಾಡಿರದ ವಿಭಿನ್ನ ಪಾತ್ರ. ಒಬ್ಬ ಕಲಾವಿದೆಯಾಗಿ ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲು ಈ ಸಿನಿಮಾ, ಪಾತ್ರ ಒಂದೊಳ್ಳೆ ಅವಕಾಶ’ ಎಂದು ಹೇಳಿಕೊಳ್ಳುತ್ತಾರೆ ರೀಷ್ಮಾ. ‘ಕೆಡಿ’ ಜತೆ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘ಯುಐ’, ಗಣೇಶ್ ನಾಯಕನಾಗಿರುವ, ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ‘ಬಾನದಾರಿಯಲ್ಲಿ’ ಹಾಗೂ ಧನ್​ವೀರ್ ಗೌಡಗೆ ನಾಯಕಿಯಾಗಿ ‘ವಾಮನ’ ಚಿತ್ರಗಳಲ್ಲಿ ರೀಷ್ಮಾ ಕಾಣಿಸಿಕೊಳ್ಳಲಿದ್ದಾರೆ.

    ಧ್ರುವ ಸರ್ಜಾ ಜತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ಅವರು ಸ್ಟಾರ್ ನಟನಾಗಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ. ಆದರೂ, ಸೆಟ್​ನಲ್ಲಿ ಹೆಚ್ಚು ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ಪ್ರತಿ ಶಾಟ್ ಆದ ಬಳಿಕ ಮಾನಿಟರ್ ಮಾಡುತ್ತಾರೆ. ಉತ್ತಮ ರೀತಿಯಲ್ಲಿ ತಾವು ಪರ್ಫಾಮ್ರ್ ಮಾಡುವುದಲ್ಲದೇ, ನಮ್ಮನ್ನೂ ಚೆನ್ನಾಗಿ ನಟಿಸುವಂತೆ ಪ್ರೇರೇಪಿಸುತ್ತಾರೆ. ಅವರ ಜತೆ ನಟಿಸುತ್ತಿರುವ ಖುಷಿಯಿದೆ.

    | ರೀಷ್ಮಾ ನಾಣಯ್ಯ

    ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

    ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts