ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!

Calf F
Published on

ಭೋಪಾಲ್: ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ ಎಂಬ ಮಾತಿದೆ. ಅದೇ ರೀತಿ ಹಸುವಿನ ಹೊಟ್ಟೆಯಲ್ಲಿ ಹಸು, ನಾಯಿಯ ಹೊಟ್ಟೆಯಲ್ಲಿ ನಾಯಿಯೇ ಜನಿಸುವುದು ಸಹಜ. ಆದರೆ ಇಲ್ಲೊಂದು ಕಡೆ ಸಿಂಹವನ್ನು ಹೋಲುವ ಕರುವಿಗೆ ಹಸು ಜನ್ಮ ನೀಡಿದೆ.

ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಹಳ್ಳಿಯೊಂದರ ನತ್ತುಲಾಲ್ ಶಿಲ್ಪಕರ್ ಎಂಬ ರೈತನ ಮನೆಯಲ್ಲಿ ಹಸುವೊಂದು ಸಿಂಹದ ಮರಿಯನ್ನು ಹೋಲುವಂಥ ಕರುವಿಗೆ ಜನ್ಮ ನೀಡಿದೆ. ಇಂಥದ್ದೊಂದು ವಿಚಿತ್ರ ಘಟನೆಯಿಂದ ಗ್ರಾಮಸ್ಥರು ಮಾತ್ರವಲ್ಲದೆ ಪಶುವೈದ್ಯರು ಕೂಡ ಅಚ್ಚರಿಗೊಂಡಿದ್ದಾರೆ. ಈ ವಿಷಯ ಹಬ್ಬುತ್ತಿದ್ದಂತೆ ರೈತನ ಮನೆ ಬಳಿ ಜಮಾಯಿಸಿದ್ದರು.

ಹಸುವಿನ ಗರ್ಭಕೋಶದಲ್ಲಿನ ದೋಷದಿಂದಾಗಿ ಹೀಗಾಗಿದೆ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದು ವಿಚಿತ್ರವೇನೂ ಅಲ್ಲ, ಇಂಥ ಸಮಸ್ಯೆ ಭ್ರೂಣ ಸರಿಯಾಗಿ ಬೆಳವಣಿಗೆ ಕಾಣದ್ದರಿಂದ ಉಂಟಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಜನನದ ವೇಳೆ ಆರೋಗ್ಯವಾಗಿಯೇ ಇದ್ದ ಕರು, ಅದಾಗಿ ಅರ್ಧಗಂಟೆಯಲ್ಲಿ ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net