‘ಹಾಯ್ ಫ್ರೆಂಡ್ಸ್’ ಎನ್ನುತ್ತ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ರೀಲ್ಸ್‌ ಸ್ಟಾರ್‌ ರೇಷ್ಮಾ

reshma
Published on

ಬೆಂಗಳೂರು: ಹಾಯ್​ ಫ್ರೆಂಡ್ಸ್... ಎನ್ನುತ್ತಾ ಸದಾ ರೀಲ್ಸ್ ಮೂಲಕ ಸದ್ದು ಮಾಡುತ್ತಿದ್ದ ರೇಷ್ಮಾ ಇದೀಗ  ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ-3 ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಿದ್ದಾರೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ರೇಷ್ಮಾ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸಿನಿಮಾ ಹಾಡುಗಳಿಗೆ ರೀಲ್ಸ್ ಮೂಲಕ ಮತ್ತು ಇಂಗ್ಲಿಷ್ ಪದಗಳನ್ನು ತಪ್ಪಾಗಿ ಹೇಳುವ ಮೂಲಕ ಸಖತ್ ಟ್ರೋಲ್ ಆಗಿದ್ದರು. ಇದೀಗ ಗಿಚ್ಚಿ ಗಿಲಿಗಿಲಿ-3 ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಿದ್ದಾರೆ. ರೇಷ್ಮಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ‘ಗಿಚ್ಚಿ ಗಿಲಿಗಿಲಿ’ ಸೆಟ್ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ರೇಷ್ಮಾ ಅವರು ಖಾಸಗಿ ವಿಷಯಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳೋದುಂಟು. ಇಂಗ್ಲಿಷ್ ಪದಗಳನ್ನು ಉಚ್ಛಾರ ಮಾಡಲು ಬಾರದೆ ಅವರು ಸಾಕಷ್ಟು ಬಾರಿ ಟ್ರೋಲ್ ಆಗಿದ್ದೂ ಇದೆ. ಸಿನಿಮಾ ಹಾಡುಗಳು ಸೇರಿದಂತೆ ಸಾಕಷ್ಟು ಟ್ರೋಲ್ ಆಗುವ ವಿಷಯಗಳನ್ನು ರೇಷ್ಮಾ ಅವರು ರೀಲ್ಸ್ ಮಾಡುತ್ತಿರುತ್ತಾರೆ, ಇನ್ನು ಅವರ ರೀಲ್ಸ್‌ನಲ್ಲಿ ರೇಷ್ಮಾ ಪತಿ ಕೂಡ ಆಗಾಗ ಬಂದು ಹೋಗುತ್ತಿರುತ್ತಾರೆ. ರೇಷ್ಮಾ ಅವರು ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಹೇಗೆ ನಟಿಸ್ತಾರೆ, ಕಾಮಿಡಿ ಮಾಡ್ತಾರೆ ಅಂತ ಕಾದು ನೋಡಬೇಕಿದೆ.

ರೀಲ್ಸ್ ಮೂಲಕ ಸಖತ್​ ಸುದ್ದಿಯಲ್ಲಿದ್ದ ಈಕೆ ಕಾಮಿಡಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅಭಿನಯ ಹೇಗಿರಲಿದೆ ಎಂಬುದರ ಬಗ್ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

‘https://www.vijayavani.net/actor-kichacha-sudeep-pays-condolences-on-his-fans-death

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net