ರೆಡ್ಮಿಯಿಂದ ಶೀಘ್ರವೇ ಮತ್ತೊಂದು ಹೊಸ ಸ್ಮಾರ್ಟ್​ಪೋನ್​ ಬಿಡುಗಡೆ..?

redmi 13 pro
ಸಾಂದರ್ಭಿಕ ಚಿತ್ರ
Published on

ದೆಹಲಿ: ಭಾರತೀಯ ಮೊಬೈಲ್​ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿರುವ ಪ್ರಮುಖ ರೆಡ್ಮಿ ಕಂಪನಿಯು ಶೀಘ್ರದಲ್ಲೇ ಮತ್ತೊಂದು ಸ್ಮಾರ್ಟ್‌ಫೋನ್​ನ್ನು ಬಿಡುಗಡೆ ಮಾಡಲಿದ್ದು, ಮೊಬೈಲ್​ ಪ್ರೀಯರೆಲ್ಲರೂ ಈ ಫೋನ್​ಗಾಗಿ ಕಾತುರದಿಂದ ಬಿಡುಗಡೆಯಾಗುವುದನ್ನು ನೋಡುತ್ತಿದ್ದಾರೆ.

ರೆಡ್ಮಿ ನೋಟ್​ ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ ಮೊಬೈಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಂಪನಿಯು ಕೆಲ ದಿನಗಳ ಹಿಂದೆ ರೆಡ್ಮಿ ನೋಟ್​ 12 ಸರಣಿಗಳನ್ನು ಬಿಡುಗಡಗೊಳಿಸಿತ್ತು. ಇದರ ಬೆನ್ನಲ್ಲೆ ರೆಡ್ಮಿ ನೋಟ್​ 13 ಸರಣಿಯನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದ ಹೇಳಲಾಗಿದೆ. Redmi Note 13 ಸರಣಿಯ ಸ್ಮಾರ್ಟ್‌ಫೋನ್‌ಗಳು Redmi Note 13, Redmi Note 13 Pro, Redmi Note 13 Pro+ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿರುತ್ತವೆ. ಆದರೆ ಕಂಪನಿಯು ಇದನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಿದೆಯಂತೆ.

ಇದನ್ನೂ ಓದಿ: ಪತಿ ಸುಖವಾಗಿರಲೆಂದು ಜಾಮೀನು ಕೊಡಿಸಿದ ಪತ್ನಿ: ಗುಂಡಿಕ್ಕಿ ಆಕೆಯ ಪ್ರಾಣ ತೆಗೆದ ಗಂಡ..

ಕಂಪನಿಯು ಅಧಿಕೃತವಾಗಿ ಈ ಸ್ಮಾರ್ಟ್​ಫೋನ್​ ಕುರಿತಾಗಿ ಯಾವುದೇ ವಿಶೇಷತೆಗಳ ಬಗ್ಗೆ ಹೇಳದಿದ್ದರೂ. ರೆಡ್ಮಿ ನೋಟ್​ 12 ಪ್ರೋ ಪ್ಲಸ್​​ನಂತೆ, ರೆಡ್ಮಿ ನೋಟ್​ 13 ಪ್ರೋ ಪ್ಲಸ್​ ಹಿಂಭಾಗದಲ್ಲಿ 200MP ಪ್ರಾಥಮಿಕ ಕ್ಯಾಮರಾದೊಂದಿಗೆ ಬರಲಿದೆ. ಹಿಂಭಾಗದ ಫ್ರೇಮ್ ಇನ್ನೂ ಎರಡು ಕ್ಯಾಮೆರಾ ಸಂವೇದಕಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಹೆಚ್ಚುವರಿಯಾಗಿ, ಲಾಸ್ಟ್ ಎಲ್ಇಡಿ ಫ್ಲ್ಯಾಷ್ ಲೈಟ್ ಸೆಟಪ್ ಹೊಂದಿರುವುದರೆ ಜತೆಗೆ 4x ಇನ್-ಸೆನ್ಸರ್ ಜೂಮ್ ಬೆಂಬಲ ಆಯ್ಕೆಯೊಂದಿಗೆ ಬರಲಿದೆ. ಅಲ್ಲದೇ, 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರಲಿದ್ದು, ಕರ್ವ್ಡ್-ಎಡ್ಜ್ ಡಿಸ್ಪ್ಲೇ ಒಳಗೊಂಡಿರಲಿದೆ ಎನ್ನಲಾಗಿದೆ. ಉಳಿದಂತೆ ಫಿಂಗರ್​ಪ್ರಿಂಟ್​ ಸೆನ್ಸಾರ್​, 6 ಇಂಚಿನ ಪರದೆ, ಚಾರ್ಜಿಂಗ್​​ಗಾಗಿ ಸಿ ಪೋರ್ಟ್ ಮತ್ತು 5ಜಿ ಬೆಂಬಲವನ್ನು ಇದು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net