ಶಿಕ್ಷಕರ ನೇಮಕಾತಿ ಶಾಲೆ ಕಾವಲು ಕಾಯುವುದಕ್ಕಾ?

R.Ashok
Published on

ಕೋಲಾರ: ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಕೆಲಸವನ್ನು ಕಾಂಗ್ರೆಸ್​ ಸರ್ಕಾರವು ಬಿಬಿಎಂಪಿಯ ಸೆಕ್ಯುರಿಟಿ ಏಜೆನ್ಸಿಗೆ ನೀಡಿದೆ. ಅಂದರೆ ಈ ನೇಮಕಾತಿ ಕಾಪೋರ್ರೇಷನ್​ ಶಾಲೆಗಳಿಗೆ ಕಾವಲು ಕಾಯುವುದಕ್ಕಾ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್​.ಅಶೋಕ ಪ್ರಶ್ನಿಸಿದರು.

ನಗರದ ಜೆಡಿಎಸ್​ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ತರನ್ನು ಹೊಂದಿರುವ ಸಂಸ್ಥೆಗೆ ನೇಮಕಾತಿ ಜವಾಬ್ದಾರಿ ನೀಡಿದ್ದರೆ ಪಾರದರ್ಶಕವಾಗಿ ನಡೆಯುತ್ತಿತ್ತು ಎಂದರು. ರಾಜ್ಯದಲ್ಲಿ ಇರುವುದು ಲೂಟಿಕೋರರ ಸರ್ಕಾರ. ಬ್ರಾ$್ಯಂಡ್​ ಬೆಂಗಳೂರು ಮಾಡುವುದಾಗಿ ಹೇಳಿ ಲೂಟಿ ಬೆಂಗಳೂರು ಮಾಡಿದ್ದಾರೆ. ಕಾಂಗ್ರೆಸ್​ ಸರ್ಕಾರದ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಕುಸಿದಿದೆ, ನಿತ್ಯವು ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚುತ್ತಲೆ ಇವೆ ಎಂದು ಆರೋಪಿಸಿದರು.
ಸರ್ಕಾರದ ಭ್ರಷ್ಟಚಾರವನ್ನು ಬಯಲು ಮಾಡಿ ಚಂದ್ರಶೇಖರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಒಂದು ಇಲಾಖೆಯಲ್ಲಿ 187 ಕೋಟಿ ರೂ. ಅವ್ಯವಹಾರ ಆಗಿರುವುದು ಗೊತ್ತಾಗಿದ್ದು, ಅಕೌಂಟೆಂಟ್​ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಯಾರು ಕಾರಣ ಎಂದು ಡೆತ್​ನೋಟ್​ನಲ್ಲಿ ಮಂತ್ರಿ ಸೇರಿ ಅಧಿಕಾರಿಗಳ ಹೆಸರು ಬರೆದು ಇಟ್ಟಿದ್ದಾರೆ. ಆದರೂ, ಇನ್ನು ಎಫ್​ಐಆರ್​ ಏಕೆ ದಾಖಲು ಮಾಡಿಲ್ಲ ಎಂದು ಕೇಳಿದರೆ ಹೆಸರನ್ನು ಬರೆದಿಲ್ಲ ಎಂದು ಹೇಳುತ್ತಾರೆ. ಲೂಟಿ ಸರ್ಕಾರಕ್ಕೆ ಸಾ ಈಗ ಕಣ್ಣು ಮುಂದೆ ಇದೆ. ಮಾನ ಮಾರ್ಯಾದೆ ಇದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮಹಿಳೆಯರಿಗೆ ಸ್ವತಂತ್ರವಾಗಿ ಬದುಕುವ ಗ್ಯಾರಂಟಿ ಕೊಟ್ಟಿಲ್ಲ. ೇತ್ರಕ್ಕೆ ಅನುದಾನ ಕೊಡಿ ಎಂದು ಶಾಸಕರು, ಮುಖ್ಯಮಂತ್ರಿ, ಸಚಿವರಿಗೆ ಪತ್ರ ಬರೆದರೆ ಗ್ಯಾರಂಟಿ ಕೊಟ್ಟಿಲ್ವ ಅಂತ ಕೇಳ್ತಾರೆ. ಪತ್ರಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ, ಶಾಸಕರ ಪತ್ರಗಳಿಗೂ ಬೆಲೆಯಿಲ್ಲದಂತಾಗಿದೆ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net