More

    ಒಮ್ಮೆ ಈ ರೀತಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ನೋಡಿ!

    ಬೆಂಗಳೂರು: ಇನ್ನೇನು ಶ್ರಾವಣ ಮಾಸ ಆರಂಭವಾಗುವ ಸಮಯ. ಈ ಸಮಯದಲ್ಲಿ ಕೆಲವರು ಉಪವಾಸ ಮಾಡುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ತಿನ್ನಲು ನಿಮಗೆ ಅವಕಾಶ ಇರುತ್ತದೆ. ಅಂತಹ ಸಮಯದಲ್ಲಿ ನೀವು ಪಪ್ಪಾಯಿ ಹಣ್ಣಿನ ಜ್ಯೂಸ್ ಕುಡಿಯಬಹುದು. ಹಾಗಾದರೆ ಸುಲಭವಾಗಿ ಪಪ್ಪಾಯಿ ಜ್ಯೂಸ್ ಮಾಡುವುದು ಹೇಗೆಂದು ತಿಳಿಯೋಣ….

    ಬೇಕಾಗುವ ಪದಾರ್ಥಗಳು
    ಪಪ್ಪಾಯಿ
    ಹಾಲು
    ಸಕ್ಕರೆ
    ಏಲಕ್ಕಿ ಪುಡಿ

    ಮಾಡುವ ವಿಧಾನ
    ಪಪ್ಪಾಯಿ ಜ್ಯೂಸ್ ಮಾಡಲು ಜ್ಯೂಸ್ ಜಾರ್ ತೆಗೆದುಕೊಳ್ಳಿ. ನಂತರ ಪಪ್ಪಾಯಿಯ ಸಿಪ್ಪೆ ತೆಗೆದು ಅದರಲ್ಲಿ ಹಾಕಬೇಕು. ಇದಾದ ನಂತರ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಕಾಲು ಚಮಚ ಏಲಕ್ಕಿ ಪುಡಿ, ಸ್ವಲ್ಪ ನೀರನ್ನು ಜಾರ್‌ನಲ್ಲಿ ಹಾಕಿ ರುಬ್ಬಿ. ನಂತರ ಐಸ್‌ ಕ್ಯೂಬ್‌ಗಳನ್ನು ಹಾಕಿ ಸರ್ವ್ ಮಾಡಬೇಕು.

    ಕಲಸಿದ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ?, ಹಾಗಾದರೆ ಜಾಗರೂಕರಾಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts