

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್ ರುಚಿ ಬರುವುದಿಲ್ಲ ಎಂದು ಆಲೋಚಿಸುತ್ತಿದ್ದೀರಾ. ಈಗೆ ಮನೆಯಲ್ಲಿಯೇ ನೀವು ಹೋಟೆಲ್ನಲ್ಲಿ ಸಿಗುವಂತ ರುಚಿಕರ ಮಸಾಲಾ ವಡೆ ಮನೆಯಲ್ಲೆ ಮಾಡಿ. ಸಂಜೆ ತಿಂಡಿಯಾಗಿ ಮಸಾಲೆಯುಕ್ತ ಏನನ್ನಾದರೂ ಮಾಡಲು ಬಯಸಿದರೆ ನಿಮಗಾಗಿಯೇ ಈ ರೆಸಿಪಿ.(Recipe)
ಮಸಾಲಾ ವಡೆ ಮಾಡಲು ಮೊದಲು ನೆನೆಸಿದ ಬೇಳೆಯನ್ನು ನೆನಸಿರಬೇಕು. ಬಳಿಕ ನೆನಸಿದ ಬೇಳೆ ಮತ್ತು ತೆಂಗಿನತುರಿಯನ್ನು ಹಾಕಿ ಮಿಕ್ಸರ್ನಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ತುಂಬಾ ನುಣ್ಣಗೆ ಇರಬಾರದು ಎಂಬುದನ್ನು ನೆನಪಿಡಿ. ನಂತರ ನುಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಜೀರಿಗೆ, ಇಂಗು, ಅರಿಶಿನ ಪುಡಿ, ಚಿಲ್ಲಿ ಪೌಡರ್, ಉಪ್ಪು, ಗರಂ ಮಸಾಲ ಮತ್ತು ಧನಿಯಾ ಪುಡಿಯನ್ನು ರುಬ್ಬಿದ ಬೇಳೆ ಪೇಸ್ಟೆಗೆ ಸೇರಿಸಿ ಮಿಶ್ರಣ ಮಾಡಿ
ಈಗ ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ ಚೆನ್ನಾಗಿ ಬಿಸಿಯಾದಾಗ ರೆಡಿಯಾಗಿರುವ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿ ನಿಮಗೆ ಬೇಕಾದ ಆಕಾರಗೊಳಿಸಿ ಎಣ್ಣೆಯಲ್ಲಿ ಹಾಕಿ, ಗೋಲ್ಡನ್ ಬಣ್ಣಕ್ಕೆ ಬರುವವರೆಗೂ ಚೆನ್ನಾಗಿ ಬೇಯಿಸಿ. ಬಳಿಕ ಅದನ್ನು ಒಂದು ತಟ್ಟೆಯಲ್ಲಿ ತೆಗೆದು ಮೊಸರು ಅಥವಾ ಚಟ್ನಿಯೊಂದಿಗೆ ಸವಿಯಲು ಬಡಿಸಿ.