ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್ಫಾಸ್ಟ್ ಮಾಡಬೇಕು ಆದರೆ ಹೆಚ್ಚು ಸಮಯ ಆಗಬಾರದು ಎಂದು ಗೃಹಿಣಿಯರು ಆಲೋಚಿಸುತ್ತಿರುತ್ತಾರೆ. ಅವರಿಗಾಗಿಯೇ ಇಲ್ಲಿ ಕಡಿಮೆ ಸಮಯದಲ್ಲಿ ರುಚಿಕರವಾಗಿ ಮಾಡಬಹುದಾದ ಖಾದ್ಯದ ರೆಸಿಪಿಯನ್ನು ತಿಳಿಸಲಾಗಿದೆ. ಪೂರಿ ಎಲ್ಲರು ಇಷ್ಟಪಟ್ಟು ತಿನ್ನುತ್ತಾರೆ. ಅದನ್ನು ಇನ್ನಷ್ಟು ರುಚಿಕರವಾಗಿ ಮಾಡಿದರೆ ಮನೆಮಂದಿ ಮನದಲ್ಲಿ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವುದಂತೂ ಗ್ಯಾರಂಟಿ.(Recipe)
ಇದನ್ನು ಓದಿ: ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್ ವಿಧಾನ | Recipe
ಈ ವಿಶೇಷ ರೆಸಿಪಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲಿಯೇ ರುಚಿಯಾದ ಆಲೂಗಡ್ಡೆ ಪೂರಿ ಮಾಡಿ ತಿನ್ನಬಹುದು. ಅರೇ ಆಲೂಗೆಡ್ಡೆ ಪಲ್ಯ ಮತ್ತು ಪೂರಿ ಅಲ್ಲ, ಆಲೂಪೂರಿ. ಆಲೂ ಕಿ ಪುರಿ ರುಚಿಕರ ಹಾಗೂ ಪೌಷ್ಟಿಕ ಆಹಾರವಾಗಿದೆ. ಇಷ್ಟೇ ಅಲ್ಲ ನಿಮ್ಮ ಮಗು ತಿನ್ನದೆ ಹಠ ಮಾಡುತ್ತಿದ್ದರೆ ಈ ಆಲೂ ಪೂರಿ ಕೊಟ್ಟುನೋಡಿ ನಿಮಗೆ ತಿಳಿಯುತ್ತದೆ. ಇದು ಮಕ್ಕಳ ನೆಚ್ಚಿನ ಖಾದ್ಯವಾಗುವುದರಲ್ಲಿ ಸಂದೇಹವೇ ಆಲೂಗಡ್ಡೆ ಪೂರಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಆಲೂ ಪೂರಿ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗೆಡ್ಡೆ
- ಮೈದಾಹಿಟ್ಟು ಅಥವಾ ಗೋಧಿ ಹಿಟ್ಟು
- ಹಸಿರು ಮೆಣಸಿನಕಾಯಿ,
- ಚಿಲ್ಲಿ ಪೌಡರ್
- ಶುಂಠಿ
- ಜೀರಿಗೆ
- ಇಂಗು
- ಧನಿಯಾ ಪುಡಿ
- ಉಪ್ಪು
ಆಲೂಪೂರಿ ಮಾಡುವ ವಿಧಾನ
ಆಲೂಗಡ್ಡೆ ಪೂರಿ ಮಾಡಲು ಮೊದಲು ದೊಡ್ಡ ಪಾತ್ರೆಯಲ್ಲಿ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಮೃದುವಾಗಿ ಹಿಟ್ಟನ್ನು ಬೆರೆಸಿಕೊಳ್ಳಿ. ಈಗ ಈ ಹಿಟ್ಟನ್ನು 15 ರಿಂದ 20 ನಿಮಿಷಗಳ ಕಾಲ ಮುಚ್ಚಿಡಿ. ಇದರ ನಂತರ ಆಲೂಗಡ್ಡೆ ಮಸಾಲಾವನ್ನು ತಯಾರಿಸಿ. ಒಂದು ಬಟ್ಟಲಿನಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ನಂತರ ಹಸಿರು ಮೆಣಸಿನಕಾಯಿ, ಚಿಲ್ಲಿ ಪೌಡರ್, ಅರಿಶಿನ ಪುಡಿ, ಶುಂಠಿ, ಇಂಗು, ಜೀರಿಗೆ, ಧನಿಯಾ ಪುಡಿ, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕಲಸಿರುವ ಹಿಟ್ಟನ್ನು ಪೂರಿ ಮಾಡುವಾಗ ಮಾಡುವಂತೆ ಉಂಡೆಯನ್ನು ಮಾಡಿ, ಬಳಿಕ ಅದನ್ನು ಸಣ್ಣ ಬಟ್ಟಲಿನ ಆಕಾರದಲ್ಲಿ ಮಾಡಿಕೊಳ್ಳಿ. ಆಲೂಗಡ್ಡೆ ಮಿಶ್ರಣವನ್ನು ಮಧ್ಯದಲ್ಲಿ ತುಂಬಿಸಿ ಅದರ ಅಂಚುಗಳನ್ನು ಮುಚ್ಚಿ.ಈಗ ಅದನ್ನು ವೃತ್ತಾಕಾರವಾಗಿ ಸುತ್ತಿಕೊಳ್ಳಿ ಮತ್ತು ಸಣ್ಣ ರೊಟ್ಟಿಯಂತೆ ಆಕಾರ ಮಾಡಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಪೂರಿಗಳನ್ನು ಗೋಲ್ಡನ್ ಆಗುವವರೆಗೆ ಹುರಿಯಿರಿ. ಈಗ ನಿಮ್ಮ ಆಲೂಗಡ್ಡೆ ಪುರಿ ಸವಿಯಲು ಸಿದ್ಧವಾಗಿದೆ.
ಮನೆಯಲ್ಲಿಯೇ ಮಾಡಿ ರುಚಿಕರ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ತಯಾರಿಸುವ ವಿಧಾನ | Recipe