ಕೊಂಡೆವೂರು ಆಶ್ರಮದಲ್ಲಿ ಸ್ವಾಗತ ಸಮಿತಿ ಸಭೆ : ಭಾರತ ಕಿಸಾನ್ ಸಂಘದ ಕೇರಳ ಕೃಷಿ ರಥಯಾತ್ರೆ

Published on

ಮಂಜೇಶ್ವರ: ಭಾರತ ಕಿಸಾನ್ ಸಂಘದ ಕೇರಳ ಕೃಷಿ ರಥಯಾತ್ರೆ ಸ್ವಾಗತ ಸಮಿತಿ ಸಭೆ ಕೊಂಡೆವೂರು ಶ್ರೀ ಯೋಗಾನಂದ ಆಶ್ರಮದಲ್ಲಿ ಇತ್ತೀಚೆಗೆ ನಡೆಯಿತು.

ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಆಕರ್ಷಕ ರಥ ಯಾತ್ರೆ ಬಗ್ಗೆ ಗೋಪಾಲ್ ಶೆಟ್ಟಿ ಸಲಹೆ ನೀಡಿದರು. ರಾಜ್ಯ ಕಾರ್ಯದರ್ಶಿ ರತೀಶ್ ಗೋಪಾಲ್ ಮಾಹಿತಿ ನೀಡಿದರು. ಕ್ಯಾಂಪ್ಕೊ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ವಿವಿಧ ಸಮಿತಿಗಳನ್ನು ರಚಿಸಲಾಯಿತು.

ರಥಯಾತ್ರೆ ಜಿಲ್ಲಾ ಸಂಯೋಜಕರಾಗಿ ವಿನೋದ್ ಬಾಯಾರ್ ಅವರನ್ನು ನೇಮಿಸಲಾಯಿತು. ಮಂಜೇಶ್ವರದಿಂದ ಏ.2ರಿಂದ ಆರಂಭಗೊಳ್ಳುವ ರಥಯಾತ್ರೆ ಏ.28ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿರುವುದು.

ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪದ್ಮನಾಭ ಕೋಟೆಕಾರ್ ಸ್ವಾಗತಿಸಿದರು. ಜಗನ್ನಾಥ್ ಮಾಸ್ತರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net