ಚಿನ್ಮಯ ಮಿಷನ್ ವಸತಿ ಯೋಜನೆ ಶಿಲಾನ್ಯಾಸ

New Project (52)
Published on

ಬದಿಯಡ್ಕ: ಚಿನ್ಮಯ ಮಿಷನ್‌ನ ವಸತಿ ರಹಿತರಿಗೊಂದು ವಸತಿ ಯೋಜನೆ ಅಡಿಯಲ್ಲಿ 9ನೇ ಮನೆಯ ಶಿಲಾನ್ಯಾಸವನ್ನು ಚಿನ್ಮಯ ಮಿಷನ್ ಮುಖ್ಯಸ್ಥ ಸ್ವಾಮಿ ಶ್ರೀವಿವಿಕ್ತಾನಂದ ಸರಸ್ವತಿ ಸೋಮವಾರ ನೆರವೇರಿಸಿದರು.

ಚಿನ್ಮಯ ವಿದ್ಯಾಲಯ ಬದಿಯಡ್ಕ ಶಾಲೆಯಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ ನಾಗವೇಣಿ ದಂಪತಿ ಈ ಯೋಜನೆಯ ಫಲಾನುಭವಿಗಳು. ಶಾಲಾ ಮೇಲ್ವಿಚಾರಕ ಪ್ರಶಾಂತ ಬೆಳಿಂಜ, ಮುಖ್ಯಶಿಕ್ಷಕಿ ಮಾನಸಾ, ಶಾಲೆ ಹಿತೈಷಿಗಳಾದ ಪಿಲಿಂಗಲ್ಲು ಕೃಷ್ಣ ಭಟ್, ಪ್ರಬಂಧಕ ಗಣೇಶ್, ಕಟ್ಟಡ ಅಭಿಯಂತರ ಮೇಲ್ವಿಚಾರಕ ದಿನೇಶ್ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net