

Sidharth Malhotra : ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಬಾಲಿವುಡ್‌ನ ಖ್ಯಾತ ಯುವ ತಾರಾದಂಪತಿ. ಪ್ರೀತಿಯಲ್ಲಿ ಬಿದ್ದ ಬಳಿಕ 2023, ಫೆಬ್ರವರಿ 7ರಂದು ವಿವಾಹವಾದರು. ಪ್ರಸ್ತುತ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಲಸ್ಟ್ ಸ್ಟೋರೀಸ್ ಸಿನಿಮಾದಲ್ಲಿ ಲೈಂಗಿಕ ಪರಾಕಾಷ್ಠೆಯ ಸನ್ನಿವೇಶವೊಂದನ್ನು ಚಿತ್ರೀಕರಿಸುವಾಗ ಸಿದ್ಧಾರ್ಥ್ ಆ ಸೆಟ್‌ನಲ್ಲಿದ್ದರಂತೆ. ಈ ಒಂದು ದೃಶ್ಯ ಕಿಯಾರಾ ಅಡ್ವಾಣಿ ಅವರನ್ನು ಬಹಳ ಫೇಮಸ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇಂದಿಗೂ ಆ ದೃಶ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲಿ ಕಿಯಾರಾ ಅವರು ನೈಜವಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶಿಸಿದರು.
ಕರಣ್ ಜೋಹರ್ ಅವರನ್ನು ಭೇಟಿಯಾಗಲೆಂದು ಸಿದ್ಧಾರ್ಥ್ ಶೂಟಿಂಗ್ ಸೆಟ್ಗೆ ಹೋಗಿದ್ದರು. ಈ ವೇಳೆ ಕರಣ್ ಅವರು ಕಿಯಾರಾ ಅಡ್ವಾಣಿ ಅವರ ಲೈಂಗಿಕ ಪರಕಾಷ್ಠೆಯ ದೃಶ್ಯವನ್ನು ಶೂಟ್ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಕಿಯಾರಾ ಅವರನ್ನು ಭೇಟಿ ಮಾಡಿದೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ. ಪತ್ನಿ ಕಿಯಾರಾ ಜತೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಿದ್ಧಾರ್ಥ್ ಈ ಹೇಳಿಕೆಯನ್ನು ನೀಡಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಲಸ್ಟ್ ಸ್ಟೋರೀಸ್ ನಾನು ಅವಳನ್ನು (ಕಿಯಾರಾ) ಭೇಟಿಯಾಗಲು ಕಾರಣ. ಆ ಚಿತ್ರ ನಿರ್ಮಾಣವಾಗಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಆ ಚಿತ್ರದ ಸೆಟ್‌ನಲ್ಲಿ ಕರಣ್ ಜೋಹರ್ ಅವರನ್ನು ಭೇಟಿಯಾಗಲು ಹೋಗಿದ್ದೆ. ನಾವು (ಕಿಯಾರಾ ಮತ್ತು ನಾನು) ಭೇಟಿಯಾದೆವು. ಆ ದೃಶ್ಯದ ನಂತರ ನಾನು ಅವಳೊಂದಿಗೆ ಮಾತನಾಡಿದೆ. ಇದಾದ ನಂತರ ಅವಳು ನನ್ನ ಜೀವನವಾದಳು ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಮದುವೆ ಮತ್ತು ಈ ಜೀವನ ನನ್ನ ಕಣ್ಣುಗಳನ್ನು ತೆರೆದಿದೆ. ಕಿಯಾರಾ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದಾರೆ. ಕಿಯಾರಾ ಅವರು ಕುಟುಂಬ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರಲ್ಲಿರುವ ಮೌಲ್ಯಗಳು ಮತ್ತು ನೀತಿಗಳು ನಾನು ಅವರನ್ನು ಇನ್ನಷ್ಟು ಗೌರವಿಸುವಂತೆ ಮಾಡಿದೆ ಎಂದು ಸಿದ್ಧಾರ್ಥ್ ಹೇಳಿದರು.
ಅಂದಹಾಗೆ 33 ವರ್ಷದ ಕಿಯಾರಾ 2014ರಲ್ಲಿ ಫಗ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಗಮನಾರ್ಹ ಚಿತ್ರಗಳಲ್ಲಿ ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ (2016), ಲಸ್ಟ್ ಸ್ಟೋರೀಸ್ (2018) ಮತ್ತು 2019 ರಲ್ಲಿ ಬಿಡುಗಡೆಯಾದ ಕಬೀರ್ ಸಿಂಗ್ ಸೇರಿವೆ. ಈ ವರ್ಷ, ಕಿಯಾರಾ ರಾಮ್ ಚರಣ್ ನಟಿಸಿದ ಶಂಕರ್ ಅವರ ಗೇಮ್ ಚೇಂಜರ್‌ನಲ್ಲಿಯೂ ನಟಿಸಿದರು.