ಕೋರ್ಟ್ ಆದೇಶದ ಬಳಿಕ ಪಿಎಸ್​ಐ ಮರುಪರೀಕ್ಷೆ; ಡಿಜಿಪಿ ಪ್ರವೀಣ ಸೂದ್

Praveen Sood
Published on

ಹುಬ್ಬಳ್ಳಿ: ಕೋರ್ಟ್ ಆದೇಶದ ಬಳಿಕ ಪಿಎಸ್​ಐ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದ್ದಾರೆ. ಇದನ್ನೂ ಓದಿ: ಅಳಿಯನಿಗೆ ಕೈ ತಪ್ಪಿದ ಟಿಕೆಟ್‌; ಕಾಂಗ್ರೆಸ್​ಗೆ ಮಾವ ರಾಜೀನಾಮೆ!

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್​ಐ ಮರು ಪರೀಕ್ಷೆ ನಡೆಸಲು ಈಗಾಗಲೇ ಆದೇಶಿಸಿದ್ದೇವೆ. ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿರುವುದರಿಂದ ಆದೇಶ ಬರುವವರೆಗೂ ಪರೀಕ್ಷೆ ನಡೆಸಲು ಬರುವುದಿಲ್ಲ. ಮರು ಪರೀಕ್ಷೆಯಾಗುವ ಬಗ್ಗೆ ನನಗೆ ಭರವಸೆ ಇದೆ ಎಂದರು.

ಯಾವ ದಿನ ತೀರ್ಮಾನ ಬರುತ್ತದೆಯೋ ಅಂದು ದಿನಾಂಕ ನಿಗದಿಪಡಿಸಿ ಮರು ಪರೀಕ್ಷೆ ನಡೆಸಲು ಬದ್ಧರಿದ್ದೇವೆ. ಪಿಎಸ್​ಐ ಪರೀಕ್ಷೆ ವೇಳೆ ಯಾರು ರಾಜಿಯಾಗಿದ್ದಾರೋ ಅವರೆಲ್ಲ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಕ್ರಮವೂ ಆಗಲಿದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net