ಬೆಂಗಳೂರು | ಚಾಕೊಲೇಟ್ ತಂದು ಕೊಟ್ಟಿಲ್ಲವೆಂದು ಬದುಕು ಅಂತ್ಯಗೊಳಿಸಿದ ವಿವಾಹಿತೆ!

Nandini
Published on

ಬೆಂಗಳೂರು: ಗಂಡ ಚಾಕೊಲೇಟ್ ತಂದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಪತ್ನಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ(24) ಕ್ಷಲ್ಲಕ ಕಾರಣಕ್ಕೆ ಪ್ರಾಣಬಿಟ್ಟ ವಿವಾಹಿತೆ. ಇದನ್ನೂ ಓದಿ: ಕಾರಿನಲ್ಲಿ ವ್ಯಕ್ತಿ ಸಜೀವ ದಹನ ಪ್ರಕರಣ; ಅರ್ಧ ಸುಟ್ಟ ಒಳ ಉಡುಪಿನಿಂದ ಪತ್ತೆಯಾಯ್ತು ಮೃತ ವ್ಯಕ್ತಿಯ ಗುರುತು!

ಮೃತ ನಂದಿನಿ ಪತಿ ಗೌತಮ್ ಸೆಲೂನ್​ನಲ್ಲಿ ಕೆಲಸ ಮಾಡಿಕೊಂಡಿದ್ದ. ಎಂದಿನಂತೆ ಕೆಲಸಕ್ಕೆ ಹೊರಡುವ ವೇಳೆ ಚಾಕೊಲೇಟ್ ತಂದು ಕೊಡುವಂತೆ ಪತ್ನಿ ನಂದಿನಿ ಕೇಳಿಕೊಂಡಿದ್ದಾಳೆ. ಆದರೆ ಗೌತಮ್ ಮಾತ್ರ ತನ್ನ ಪಾಡಿಗೆ ಕೆಲಸಕ್ಕೆ ಹೋಗಿ ಸುಮ್ಮನಾಗಿದ್ದ. ಮಧ್ಯಾಹ್ನವಾದರೂ ಚಾಕೊಲೇಟ್ ತಂದು ಕೊಟ್ಟಿಲ್ಲ ಎಂದು ಫೋನ್ ಮಾಡಿದ್ದಾಳೆ. ಆದರೆ ಗೌತಮ್ ಕರೆ ಸ್ವೀಕರಿಸಿಲ್ಲ. ಇದರಿಂದ ಸಿಟ್ಟಾದ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಗೆ ಬಂದು ಗೌತಮ್ ನೋಡಿದಾಗ ನಂದಿನಿ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ನಂದಿನಿ ಸಾವನ್ನಪ್ಪಿದ್ದಾಳೆ. ಆರು ವರ್ಷದ ಹಿಂದೆ ಗೌತಮ್ ಹಾಗೂ ನಂದಿನಿ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ 4 ಮತ್ತು 2 ವರ್ಷದ ಇಬ್ಬರು ಮಕ್ಕಳಿದ್ದಾರೆ. ಸದ್ಯ ಘಟನೆಯ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net