ಕುಪ್ಪೆಪದವು ರಿಕ್ಷಾ ಚಾಲಕರ ಸಂಘಕ್ಕೆ ಪುನರಾಯ್ಕೆ

Gur_Auto-Sabhe
Published on

ಗುರುಪುರ: ಕುಪ್ಪೆಪದವು ಗ್ರಾಮ ಪಂಚಾಯಿತಿ ಸಭಾಗೃಹದಲ್ಲಿ ನಡೆದ ಕುಪ್ಪೆಪದವು ಆಟೋ ರಿಕ್ಷಾ ಚಾಲಕರ ಸಂದ ಮಹಾಸಭೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ವಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂದ ಅಧ್ಯಕ್ಷ ವಸಂತ ಆಚಾರಿ ವಾತನಾಡಿ, ರಿಕ್ಷಾ ಚಾಲಕರ ಜೀವನ ಈಗ ಕಷ್ಟಕರವಾಗಿದೆ. ಇಲ್ಲಿರುವ ಸರ್ವಧರ್ಮೀಯ ರಿಕ್ಷಾ ಚಾಲಕರು ಸ್ಥಳೀಯರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.

ಕಾರ್ಮಿಕ ಮುಖಂಡರೂ ಆಗಿರುವ ವಸಂತ ಆಚಾರಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಆಚಾರಿಜೋರ, ಕೋಶಾಧಿಕಾರಿಯಾಗಿ ವಸಂತ ಅಟ್ಟೆಪದವು ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಇದಿನಬ್ಬ ಪೂವಣಿಬೆಟ್ಟು ಮತ್ತು ಲಿಂಗಪ್ಪ ಕೋಟ್ಯಾನ್, ಕಾರ್ಯದರ್ಶಿಯಾಗಿ ಮೆಲ್ವಿನ್ ಆಯ್ಕೆಗೊಂಡರು.

ಉಳಿದಂತೆ 20 ಸದಸ್ಯರ ಸಮಿತಿ ರಚಿಸಲಾಯಿತು. ಮಹಾಸಭೆಯಲ್ಲಿ ಸಂದ ಬಹುತೇಕ ಎಲ್ಲ ರಿಕ್ಷಾ ಚಾಲಕ - ವಾಲೀಕರು ಭಾಗವಹಿಸಿದ್ದರು. ಜಗದೀಶ ದುರ್ಗಾಕೊಡಿ ಸ್ವಾಗತಿಸಿದರು. ಗಣೇಶ್ ನೇಲಚ್ಚಿಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net