ಪಿಎಸ್​ಐ ನೇಮಕಾತಿ ಹಗರಣದ ಆರೋಪಿ ಆರ್. ಡಿ. ಪಾಟೀಲ್ ಬಳಸಿದ್ದ ಸ್ವಿಫ್ಟ್​  ಕಾರು ವಶಕ್ಕೆ

car
Published on

ಕಲಬುರಗಿ: ಪಿ ಎಸ್ ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಆರ್​.ಡಿ.ಪಾಟೀಲ್​​ಗೆ ಸೇರಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. 

ಸಿಐಡಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮೂರು ದಿನಗಳಿಂದ ಇದೇ ಕಾರಿನಲ್ಲಿ ಓಡಾಡುತ್ತಿದ್ದ ಎನ್ನಲಾಗಿದ್ದು, ಸದ್ಯ ಸಿಐಡಿ ಕಾರನ್ನು ವಶಕ್ಕೆ ಪಡೆದಿದೆ.

ಈ ಕಾರು ಮಲ್ಲಿಕಾರ್ಜುನ ಬಿದನೂರಿಗೆ ಸೇರಿದ್ದಾಗಿದ್ದು, ಕಾರಿನಲ್ಲೇ ಬಟ್ಟೆ ಬದಲಾಯಿಸಿ ಆರ್​.ಡಿ.ಪಾಟೀಲ್​ ಓಡಾಡುತ್ತಿದ್ದ ಎಂದು ತನಿಖೆಯಿಂದ ಬಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net