More

    ಕೆಜಿಎಫ್​ 2 ಕೊಂಡಾಡಿದ ಅಲ್ಲು ಅರ್ಜುನ್​: ರಾಕಿಂಗ್​ ಸ್ಟಾರ್​ ಯಶ್​ಗೆ ಟ್ವೀಟ್​ ಮಾಡಿ ಹೇಳಿದ್ದೇನು?

    ಚೆನ್ನೈ: ಭಾರೀ ಯಶಸ್ಸು ಕಾಣುತ್ತಿರುವ ಕೆಜಿಎಫ್​-2 ಚಿತ್ರಕ್ಕೆ ಚಿತ್ರರಂಗದ ಗಣ್ಯರಿಂದ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಟಾಲಿವುಡ್​ನ ನಟ ಅಲ್ಲು ಅರ್ಜುನ್​ ಕೂಡ ಕೆಜಿಎಫ್​-2 ಚಿತ್ರವನ್ನು ಭಾರೀ ಪ್ರಶಂಸಿಸಿದ್ದು, ಶುಭಾಷಯ ಕೋರಿ ರಾಕಿಂಗ್​ ಸ್ಟಾರ್​ ಯಶ್​​ ಅವರಿಗೆ ಟ್ವೀಟ್​ ಮಾಡಿದ್ದಾರೆ.

    ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಅಲ್ಲು ಅರ್ಜುನ್​, ಪ್ರಶಾಂತ್​ ನೀಲ್​ ಅವರ ಚಿತ್ರದ ದೃಷ್ಟಿಕೋನ ಹಾಗೂ ಅದ್ಧುತ ಪ್ರದರ್ಶನಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಭಾರತೀಯ ಚಿತ್ರರಂಗದ ಧ್ವಜವನ್ನು ಎತ್ತರಕ್ಕೆ ಹಾರಿಸಿದ ಕೀರ್ತಿ ಸಲ್ಲುತ್ತದೆ ಎಂದು ಪ್ರತ್ಯೇಕ ಟ್ವೀಟ್​ ಮಾಡಿದ್ದಾರೆ.ಸಂಜಯ್​ ದತ್​, ರವೀನಾ ಟಂಡನ್​​ ನಾಯಕಿ ನಿಧಿ ಶೆಟ್ಟಿ ಅವರ ನಟನೆಯೂ ಅದ್ಭುತ ಎಂದು ಹೊಗಳಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ರಾಕಿಂಗ್​ ಸ್ಟಾರ್ ಯಶ್ ಥ್ಯಾಂಕ್ಯೂ ಅಲ್ಲು ಅರ್ಜುನ್​ ಅವರೇ, ನಿಮ್ಮ ಹಾರ್ಡ್​ವರ್ಕ್​​ ಬಗ್ಗೆ ನಾನು ಸದಾ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನೀವು ಯಾವಾಗಲೂ ಅದ್ಭುತ ಎಂದಿದ್ದಾರೆ.

    ಇನ್ನು ಕೆಜಿಎಫ್​-2 ಈವರೆಗೆ 650 ಕೋಟಿ ರೂ.ಗಳಿಕೆ ಕಂಡಿದ್ದು, ಹಿಂದು ಆವೃತ್ತಿ ಒಂದರಲ್ಲೇ 300 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ.

    ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ದಾಳಿಗೆ ಸಂಚು ರೂಪಿಸಿದ್ದ ಉಗ್ರರು: ಗುಪ್ತಚರ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts