ಇಂದೇ RCB v PBKS ಕ್ವಾಲಿಫೈರ್​-1 ಕದನ! ಬಹುನಿರೀಕ್ಷಿತ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಹೇಗೆ? ಹೀಗಿದೆ ಲೆಕ್ಕಾಚಾರ

ವಿಜಯವಾಣಿ - 2025-05-29T105652.182
Published on

RCB vs PBKS: ಐಪಿಎಲ್​ 18ನೇ ಆವೃತ್ತಿಯಲ್ಲಿ ಸತತ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್​​ ನಡುವೆ ಇಂದು (ಮೇ.29) ಕ್ವಾಲಿಫೈರ್​-1 ಕದನ ಸಂಭವಿಸಲಿದೆ. ಅಗ್ರಸ್ಥಾನದಲ್ಲಿ ಪಂಜಾಬ್ ಇದ್ದರೆ, ಎರಡನೇ ಸ್ಥಾನದಲ್ಲಿ ಆರ್​ಸಿಬಿ ತಂಡವಿದೆ. ಎರಡೂ ತಂಡಗಳು ಭಾರೀ ಬಲಿಷ್ಠವಾಗಿ ಕಂಡುಬಂದಿದ್ದು, ಯಾರು ಫೈನಲ್​ಗೆ ನೇರ ಲಗ್ಗೆಯಿಡಲಿದ್ದಾರೆ ಎಂಬುದೇ ರೋಚಕ, ಕೌತುಕ.

ಚಂಡಿಗಢದ ಮುಲ್ಲಾನ್​ಪುರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂದಿನ ಮೊದಲ ಕ್ವಾಲಿಫೈರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಲಿವೆ. ಕಳೆದ ಒಂದು ವಾರದಿಂದ ದೇಶಾದ್ಯಂತ ಭಾರೀ ಮಳೆಯಾಗುತ್ತಿದ್ದು, ದೆಹಲಿ, ಮುಂಬೈ ನಗರಗಳು ವರುಣಾರ್ಭಟಕ್ಕೆ ತತ್ತರಿಸಿವೆ. ಹೀಗಿರುವಾಗ ಬಹುನಿರೀಕ್ಷಿತ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಹೇಗೆ? ಎಂಬ ಗೊಂದಲ ಸದ್ಯ ಕ್ರಿಕೆಟ್​ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿದೆ. ಅಕಸ್ಮಾತ್​ ಬಿರುಸಿನ ಮಳೆ ಪಂದ್ಯಕ್ಕೆ ಅಡಚಣೆ ಉಂಟು ಮಾಡಿದ್ದೇ ಆದರೆ, ಪಂದ್ಯ ಒಂದು ದಿನ ಮುಂದೂಡಿಕೆ ಆಗಲಿದೆಯಾ ಅಥವಾ ಒಂದು ತಂಡಕ್ಕೆ ನೇರ ಫೈನಲ್​ ಪ್ರವೇಶ ಸಿಗಲಿದೆಯಾ? ಎಂಬ ಪ್ರಶ್ನೆಗಳಿಗೆ ಹೀಗಿದೆ ಉತ್ತರ.

ಈ ಪರಿಸ್ಥಿತಿ ಎದುರಾದರೆ?

ಕ್ವಾಲಿಫೈರ್​-1 ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಪಂದ್ಯವನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಇದಕ್ಕೆ ಅವಕಾಶವಿಲ್ಲ. ಹೀಗಿರುವಾಗ ಅಂಕಪಟ್ಟಿಯಲ್ಲಿ ಹೆಚ್ಚುವರಿ ಪಾಯಿಂಟ್​ಗಳಿಂದ ಮೊದಲ ಸ್ಥಾನದಲ್ಲಿರುವ ಪಂಜಾಬ್​ ನೇರವಾಗಿ ಫೈನಲ್​ ಪ್ರವೇಶಿಸಲಿದೆ. ಇನ್ನು ಆರ್​ಸಿಬಿ ಎರಡನೇ ಸ್ಥಾನದಲ್ಲಿರುವ ಕಾರಣ, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್​ ನಡುವೆ ಯಾವ ತಂಡ ಗೆಲ್ಲಲಿದೆಯೋ ಆ ತಂಡದೊಂದಿಗೆ ಫೈನಲ್​ ಪ್ರವೇಶಕ್ಕಾಗಿ ಕಾದಾಟ ನಡೆಸಲಿದೆ. ಇದು ಐಪಿಎಲ್​ ಲೆಕ್ಕಾಚಾರ.,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net