Retain ಆಟಗಾರರ ಪಟ್ಟಿ ರಿಲೀಸ್​ ಮಾಡಿದ RCB; ಆದ್ರೆ ಇಲ್ಲಿದೆ ಒಂದು ಮೇಜರ್​ ಟ್ವಿಸ್ಟ್​

RCB
Published on

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ (IPL) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ರಿಟೇನ್​ಗೆ (Retain) ಸಂಬಂಧಿಸಿದ ಸುದ್ದಿಗಳು ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿವೆ. ರಿಟೇನ್​ಗೆ (Retain) ಸಂಬಂಧಿಸಿದಂತೆ ಅಕ್ಟೋಬರ್​ 31ರ ಸಂಜೆ 5 ಗಂಟೆ ವೇಳೆ ಸ್ಪಷ್ಟ ಚಿತ್ರಣ ಹೊರಬೀಳಲಿದ್ದು, ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಅಳೆದು ತೂಗಿ ತಂಡಕ್ಕೆ ಅಗತ್ಯವಿರುವವರನ್ನು ಉಳಿಸಿಕೊಳ್ಳಲು ಮುಂದಾಗಿವೆ. ಆರ್​ಸಿಬಿ (RCB) ಕೂಡ ಈ ಬಾರಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದು, ರಿಟೇನ್​ ಪಟ್ಟಿ ಸಲ್ಲಿಸಲು ಒಂದು ದಿನ ಬಾಕಿ ಇರುವ ಸಮಯದಲ್ಲಿ ವಿಭಿನ್ನ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಡುವ ಕೆಲಸ ಮಾಡಿದೆ.

ಆರ್​ಸಿಬಿ (RCB) ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ Puzzle ಒಂದನ್ನು ಪೋಸ್ಟ್ ಮಾಡಿದ್ದು, ಇದು ಅಭಿಮಾನಿಗಳ ತಲೆಗೆ ಸಖತ್​ ಹುಳ ಬಿಟ್ಟಿಚದೆ. ಅಭಿಮಾನಿಗಳು ಈ Puzzle ಬಿಡಿಸಲು ಯಶಸ್ವಿಯಾಗಿದ್ದು, ಒಟ್ಟು ಒಂಬತ್ತು ಆಟಗಾರರನ್ನು ರಿಟೇನ್​ ಮಾಡಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.

ಈ Puzzle ಆಟದಲ್ಲಿ ಗೇಮ್​ನಲ್ಲಿ ತಂಡ ಉಳಿಸಿಕೊಳ್ಳಬಹುದಾದ ಆಟಗಾರರ ಹೆಸರನ್ನು ಅಡಗಿಟ್ಟಿಸಿದೆ. ಅದರಲ್ಲಿ ಹುಡುಕಿದಾಗ ಒಟ್ಟಾರೆ 9 ಆಟಗಾರರ ಹೆಸರು ಪತ್ತೆಯಾಗಿದೆ. ಆದರೆ ಫ್ರಾಂಚೈಸಿಯೊಂದು ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆ 6 ಮಾತ್ರ. ಹೀಗಾಗಿ ಆರ್​ಸಿಬಿ (RCB) ತಾನು ಪಟ್ಟಿ ಮಾಡಿರುವ ಈ 8ಆಟಗಾರರಲ್ಲಿ ಯಾರನ್ನು ಉಳಿಸಿಕೊಳ್ಳಲಿದೆ ಎಂಬುದು ಅಕ್ಟೋಬರ್​ 31ರ ಸಂಜೆ 5 ಗಂಟೆಗೆ ತಿಳಿಯಲಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮೊದಲನೇ ಆಯ್ಕೆಯಾಗಿ ವಿರಾಟ್​ ಕೊಹ್ಲಿ ಅವರಿದ್ದು, ಎರಡನೇ ಆಯ್ಕೆಯಾಗಿ ತಂಡ ಮೊಹಮ್ಮದ್​ ಸಿರಾಜ್​ಗೆ ಮಣೆ ಹಾಕಿದೆ.  ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ರಜತ್ ಪಾಟಿದರ್ ಹಾಗೂ ವಿಲ್ ಜಾಕ್ಸ್ ಇರಬಹುದು ಎಂದು ಹೇಳಲಾಗುತ್ತಿದ್ದು, ಅನ್​ಕ್ಯಾಪ್ಡ್ ಆಟಗಾರನಾಗಿ ಯಶ್ ದಯಾಳ್ ತಂಡದಲ್ಲಿ ಉಳಿಯಬಹುದು ಎಂದು ಹೇಳಲಾಗಿದೆ.

ಆರ್​ಸಿಬಿ ಹಂಚಿಕೊಂಡಿರುವ Puzzle ಅಲ್ಲಿ ಇರುವ ಆಟಗಾರರನ್ನು ನೋಡುವುದಾದರೆ 

  1. ವಿರಾಟ್​ ಕೊಹ್ಲಿ 
  2. ಮೊಹಮ್ಮದ್​ ಸಿರಾಜ್​ 
  3. ರಜತ್​ ಪಾಟಿದಾರ್​
  4. ಅನುಜ್​ ರಾವತ್​
  5. ಯಶ್​ ದಯಾಳ್​
  6. ಗ್ಲೆನ್​ ಮ್ಯಾಕ್ಸ್​ವೆಲ್​
  7. ಫಾಫ್​ ಡು ಪ್ಲೆಸಿಸ್​
  8. ವಿಲ್​ ಜಾಕ್ಸ್​
  9. ಕ್ಯಾಮರೂನ್​ ಗ್ರೀನ್​ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net