ಟೀಮ್​ ಇಂಡಿಯಾವನ್ನು ತವರಿನಲ್ಲಿ ಹೇಗೆ ಸೋಲಿಸಬಹುದು ಎಂದು ನಾವು ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ; ಆತಿಥೇಯರ ಕುರಿತು New Zealand ಆಟಗಾರನ ಹೇಳಿಕೆ ವೈರಲ್​

NewZealand
Published on

ಮುಂಬೈ: ನ್ಯೂಜಿಲೆಂಡ್​ (New Zealand) ವಿರುದ್ಧ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಟೀಮ್​ ಇಂಡಿಯಾ (Team India) 2-0 ಅಂತರದಿಂದ ಸೋಲುಂಡಿದ್ದು, ಭಾರೀ ಮುಖಭಂಗವನ್ನು ಅನುಭವಿಸಿದೆ. ಇನ್ನೂ ಭಾರತದ ನೆಲದಲ್ಲಿ ಬಹು ವರ್ಷಗಳ ಬಳಿಕ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ (New Zeland)​ ಹೊಸ ಇತಿಹಾಸವನ್ನು ಬರೆದಿದ್ದು, ಕ್ರೀಡಾ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೂ ಆತಿಥೇಯರ ಸರಣಿ ಗೆಲುವಿನ ಬಳಿಕ ನ್ಯೂಜಿಲೆಂಡ್​ ವೇಗಿ ಟಿಮ್​ ಸೌಥಿ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸೌಥಿ, ಟೀಮ್ ಇಂಡಿಯಾವನ್ನು ತವರಿನಲ್ಲಿ ಹೇಗೆ ಸೋಲಿಸಬೇಕೆಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಏಕೆಂದರೆ ಭಾರತ ತಂಡವು ಕಳೆದ 12 ವರ್ಷಗಳಲ್ಲಿ ತವರಿನಲ್ಲಿ ಯಾವುದೇ ಸರಣಿ ಸೋತಿರಲಿಲ್ಲ. ಇದೀಗ ಅವರ ಗೆಲುವಿನ ನಾಗಾಲೋಟಕ್ಕೆ ನಾವು ಬ್ರೇಕ್ ಹಾಕಿದ್ದೇವೆ. ಈ ಗೆಲುವಿನ ಮೂಲಕ ಟೀಮ್​ ಇಂಡಿಯಾವನ್ನು ಸೋಲಿಸಬಹುದು ಎಂದು ನಾವು ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ.

ನಾವು ಈಗ ಯಾವುದರ ಬಗ್ಗೆಯೂ ಹೆಚ್ಚು ಯೋಚಿಸುವುದಿಲ್ಲ. ಅದುವೇ ನಮ್ಮ ತಂಡದ ಶಕ್ತಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಮುಂದೆ ಏನಿದೆ, ಅದನ್ನು ನೋಡಿ ಆಡುವುದು ಮತ್ತು ಅಲ್ಲಿಯೇ ಸವಾಲನ್ನು ಸ್ವೀಕರಿಸುವುದು ನಮ್ಮ ಹೊಸ ತಂತ್ರವಾಗಿದೆ. ಈ ತಂತ್ರದಿಂದಲೇ ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಸಾಧ್ಯವಾಗಿದೆ ಎಂದು ನ್ಯೂಜಿಲೆಂಡ್​ (New Zealand) ಕ್ರಿಕೆಟ್​ ತಂಡದ ಸ್ಟಾರ್​ ವೇಗಿ ಟಿಮ್​ ಸೌಥಿ ಹೇಳಿದ್ದಾರೆ.

ನವೆಂಬರ್​ 01ರಿಂದ ಸರಣಿಯ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ವೈಟ್​ವಾಷ್​ ಭೀತಿ ತಪ್ಪಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಗೆಲ್ಲಬೇಕಿದೆ. ಇದಲ್ಲದೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ಕೂಡ ನ್ಯೂಜಿಲೆಂಡ್ (New Zealand) ಮುಂದಿದೆ. ಭಾರತ ತಂಡವು ತವರಿನಲ್ಲಿ 3-0 ಅಂತರದಿಂದ ಸರಣಿ ಸೋತು 40 ವರ್ಷಗಳೇ ಕಳೆದಿವೆ. ಹೀಗಾಗಿ ಈ ಬಾರಿ ಹೊಸ ಇತಿಹಾಸ ಬರೆಯುವ ಅವಕಾಶ ಕಿವೀಸ್ ಪಡೆ ಮುಂದಿದ್ದು, ಕಿವೀಸ್​ (New Zealand) ಪಡೆ ಈ ಅವಕಾಶವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net