

RCB Captain: ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಇದೀಗ ಫೈನಲ್ಗೆ ಪಂಜಾಬ್ ಕಿಂಗ್ಸ್ ಎಂಟ್ರಿ ಕೊಟ್ಟಿದೆ. ಐಪಿಎಲ್ 18ನೇ ಆವೃತ್ತಿಯ ಕಡೆಯ ಪಂದ್ಯದಲ್ಲಿ ಚೊಚ್ಚಲ ಟ್ರೋಫಿಗಾಗಿ ಹೋರಾಡಲಿರುವ ಆರ್ಸಿಬಿ ಮತ್ತು ಪಂಜಾಬ್ ನಡುವೆ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದೇ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ರೋಚಕ ಹಾಗೂ ಕುತೂಹಲಕಾರಿ ಪ್ರಶ್ನೆ.
ಇನ್ನು ನಾಳೆ (ಜೂ.03) ನಡೆಯಲಿರುವ ಫೈನಲ್ ಹಣಾಹಣಿಗೆ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. 2025ರ ಐಪಿಎಲ್ ಟೂರ್ನಿ ಪೂರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಜೊತೆಗೆ ಕಳೆದ 18 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ, ಚೊಚ್ಚಲ ಟ್ರೋಫಿ ಗೆಲ್ಲುವ ಭರವಸೆಯಲ್ಲಿದ್ದಾರೆ. ತಂಡದೊಂದಿಗೆ ಸುದೀರ್ಘ ಪಯಣ ಮಾಡಿರುವ ಕೊಹ್ಲಿ, ಫ್ರಾಂಚೈಸಿ ಅಭಿಮಾನಿಗಳಿಗೆ ಒಂದು ಕಪ್ ಗೆದ್ದುಕೊಡಲು ವರ್ಷಗಳಿಂದ ಶ್ರಮಿಸಿದ್ದಾರೆ. ಇದು ಈ ವರ್ಷವಾದ್ರೂ ಫಲ ಕೊಡಲಿ ಅನ್ನೋದೇ ಅಭಿಮಾನಿಗಳ ಆಶಯ. ಅಸಲಿಗೆ ಕಪ್ ಆರ್ಸಿಬಿ ಪಾಲಾಗಲಿದೆಯಾ ಎಂಬುದನ್ನು ನಾಳಿನ ಫೈನಲ್ನಲ್ಲಿ ಕಾದು ನೋಡಬೇಕಿದೆ.
ಇನ್ನು ಈ ಸಂದರ್ಭದಲ್ಲಿ ಪಂದ್ಯಕ್ಕೂ ಮುನ್ನ ಗೆಲುವಿನ ಬಗ್ಗೆ ಮಾತನಾಡಿರುವ ಆರ್ಸಿಬಿ ಕ್ಯಾಪ್ಟನ್ ರಜತ್ ಪಟೀದಾರ್, "ಫೈನಲ್ ಪಂದ್ಯಕ್ಕಾಗಿ ನಾವು ಸಿದ್ಧವಿದ್ದೇವೆ. ಟಿಮ್ ಡೇವಿಡ್ ಅವರು ತಂಡದ ಪರ ಆಡಲಿದ್ದಾರೋ ಅಥವಾ ಇಲ್ಲವೋ ಎಂಬುದು ಶೀಘ್ರವೇ ವೈದ್ಯರಿಂದ ತಿಳಿಯಲಿದೆ. ನಮ್ಮ ಪ್ರಯತ್ನ ಮೀರಿ ಕೊಹ್ಲಿಗೋಸ್ಕರ ಈ ವರ್ಷದ ಕಪ್ ಗೆಲ್ಲತ್ತೀವಿ. ಕಳೆದ ವರ್ಷಗಳಲ್ಲಿ ಟೀಮ್ ಇಂಡಿಯಾ ಮತ್ತು ಆರ್ಸಿಬಿಗೆ ಅವರ ಕೊಡುಗೆ ಅಪಾರವಾಗಿದೆ" ಎಂದು ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ,(ಏಜೆನ್ಸೀಸ್).