ನವದೆಹಲಿ: 2008ರಿಂದ ಒಂದು ಬಾರಿಯೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ, ಟೀಮ್ ಇಂಡಿಯಾದ ಶ್ರೇಷ್ಠ, ದಿಗ್ಗಜ ಆಟಗಾರ, ‘ರನ್ ಮಷಿನ್’ ಅವರ ಕೊಡುಗೆ ಅಪಾರ. ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ, ಇದೀಗ ಇತರರ ನಾಯಕತ್ವದಡಿ ತಂಡದಲ್ಲಿ ಆಡುವುದರ ಜತೆಗೆ ಉತ್ತಮ ಪ್ರದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್, ಅತ್ಯಧಿಕ ರನ್ಗಳನ್ನು ಕಲೆಹಾಕುವ ಮುಖೇನ ಆರೆಂಜ್ ಕ್ಯಾಪ್ ಗಿಟ್ಟಿಸಿಕೊಂಡರು. ಒಂದೆಡೆ ತಾವು ರನ್ಮಷಿನ್ ಎಂಬುದನ್ನು ಈಗಾಗಲೇ ಸಾಬೀತುಪಡಿಸಿರುವ ಕೊಹ್ಲಿಗೆ, ಉತ್ತಮ ಜತೆಯಾಟ ಸಿಗುತ್ತಿಲ್ಲ. ಈ ಸಮಸ್ಯೆ 17ನೇ ಆವೃತ್ತಿಯಲ್ಲಿ ಸ್ಪಷ್ಟವಾಗಿ ಕಾಣಿಸಿತು.
ಇದನ್ನೂ ಓದಿ: Bigg Boss Contestant Manasa Interview | ಅಸಲಿ ಆಟ ಅಂತಿರೋ ಮೋಕ್ಷಿತಾ ರಿಯಲ್ಲಾ? ಇಲ್ಲ ಫೇಕಾ?!
ಕಳೆದ ಸೀಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಕೊಟ್ಟ ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಉತ್ತಮ ಸಾಥ್ ನೀಡಲಿಲ್ಲ. ಒಂದೆರೆಡು ಪಂದ್ಯದಲ್ಲಿ ಒಳ್ಳೆಯ ಓಪನಿಂಗ್ ಕೊಟ್ಟಿದ್ದು ಬಿಟ್ಟರೆ, ಉಳಿದೆಲ್ಲಾ ಮ್ಯಾಚ್ಗಳಲ್ಲಿ ಅಬ್ಬರಿಸಲು ವಿಫಲರಾದರು. ಇದರಿಂದ ವಿರಾಟ್ ಬ್ಯಾಟಿಂಗ್ಗೆ ಯಾವುದೇ ತೊಂದರೆ ಕಾಡದೆ ಇದ್ದರೂ ಉತ್ತಮ ಜತೆಯಾಟ ಸಿಗುತ್ತಿರಲಿಲ್ಲ. ಇದು ತಂಡದ ಮೊತ್ತ ಹೆಚ್ಚಿಸಲು ತೀರ ಪರದಾಡುವಂತೆ ಮಾಡುತ್ತಿತ್ತು. ಇತ್ತ ವಿರಾಟ್ ಕ್ರೀಸ್ಗೆ ಅಂಟಿ ನಿಂತರೆ, ಅತ್ತ ಶೀಘ್ರವೇ ವಿಕೆಟ್ ಕಳೆದುಕೊಳ್ಳುವ ಮುಖೇನ ಫಾಫ್ ತಂಡದ ಅಪಾರ ನಿರೀಕ್ಷೆಯನ್ನು ಕುಸಿಯುವಂತೆ ಮಾಡುತ್ತಿದ್ದರು. ಇದೇ ಕಾರಣಕ್ಕೆ ಫ್ರಾಂಚೈಸಿ ಅವರನ್ನು ತಂಡದಿಂದ ಕೈಬಿಟ್ಟಿದೆ.
ಈ ಮೂವರಲ್ಲಿ ಯಾರು ಉತ್ತಮ
ಸದ್ಯ ಇದೇ ನವೆಂಬರ್ 24-25ರಂದು ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬೌಲರ್, ಆಲ್ರೌಂಡರ್ಗಳನ್ನು ಖರೀದಿಸುವುದು ಎಷ್ಟು ಮುಖ್ಯವಾಗಿದೆಯೋ ಅದಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿಗೆ ಯಾರು ಉತ್ತಮ ಸಾಥ್ ನೀಡಬಹುದು? ಯಾವ ಸ್ಟಾರ್ ಓಪನಿಂಗ್ ಬ್ಯಾಟರ್ ಬಂದರೆ ತಂಡಕ್ಕೆ ಹೆಚ್ಚು ಲಾಭವಾಗಲಿದೆ? ಎಂಬ ಲೆಕ್ಕಾಚಾರದಲ್ಲಿ ಪ್ರಾಂಚೈಸಿ ಇದೆ. ಈ ಪೈಕಿ ಮೂರು ತಂಡದ ಮೂವರು ಆಟಗಾರರನ್ನು ಟಾರ್ಗೆಟ್ ಮಾಡಿರುವ ಆರ್ಸಿಬಿ ಮ್ಯಾನೇಜ್ಮೆಂಟ್, ಈ ಮೂವರಲ್ಲಿ ಯಾರು ಉತ್ತಮ ಎಂದು ನಿರ್ಧರಿಸಿ, ಆಕ್ಷನ್ನಲ್ಲಿ ಆಯ್ಕೆ ಮಾಡಲು ಎದುರುನೋಡುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಯಾರು ಆ 3 ಬ್ಯಾಟ್ಸ್ಮನ್?
ಫಿಲ್ ಸಾಲ್ಟ್ (ಕೋಲ್ಕತ ನೈಟ್ ರೈಡರ್ಸ್)
ಡೇವನ್ ಕಾನ್ವೇ (ಚೆನ್ನೈ ಸೂಪರ್ ಕಿಂಗ್ಸ್)
ಜಾಸ್ ಬಟ್ಲರ್ (ರಾಜಸ್ಥಾನ ರಾಯಲ್ಸ್)
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ