More

    ರಚಿನ್​ ರವೀಂದ್ರ ಖರೀದಿಗೆ ಆಸಕ್ತಿ ತೋರಿಸದ ಆರ್​ಸಿಬಿ; ಕಮ್ಮಿನ್ಸ್​ಗಾಗಿ ಭಾರಿ ಪೈಪೋಟಿ!

    ದುಬೈ: ಮಂಗಳವಾರ ನಡೆದ ಐಪಿಎಲ್​ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ನ್ಯೂಜಿಲೆಂಡ್​ ಆಲ್ರೌಂಡರ್​ ರಚಿನ್​ ರವೀಂದ್ರ 1.80 ಕೋಟಿ ರೂ. ಮೊತ್ತಕ್ಕೆ ಸಿಎಸ್​ಕೆ ಪಾಲಾದರು. 50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ರಚಿನ್​ ಕಳೆದ ವಿಶ್ವಕಪ್​ನಲ್ಲಿ ಭರ್ಜರಿ ನಿರ್ವಹಣೆ ತೋರಿದ್ದರೂ, ಅವರ ಖರೀದಿಗೆ ಹೆಚ್ಚಿನ ತಂಡಗಳು ರೇಸ್​ಗೆ ಬಾರದ ಕಾರಣ ದೊಡ್ಡ ಮೊತ್ತ ಲಭಿಸಲಿಲ್ಲ. ಆರ್​ಸಿಬಿ ಪರ ಆಡುವ ಹಂಬಲವನ್ನು ರಚಿನ್​ ಈ ಮುನ್ನ ವ್ಯಕ್ತಪಡಿಸಿದ್ದರೂ, ಬೆಂಗಳೂರು ಫ್ರಾಂಚೈಸಿ ಕನಿಷ್ಠ ಬಿಡ್​ ಕೂಡ ಸಲ್ಲಿಸದಿದ್ದುದು ಅಚ್ಚರಿ ತಂದಿತು.

    ಕಮ್ಮಿನ್ಸ್​ಗಾಗಿ ಆರ್​ಸಿಬಿ ಫೈಟ್​
    ಹಾಲಿ ವರ್ಷ 3 ಪ್ರಮುಖ ಟ್ರೋಫಿ (ಏಕದಿನ-ಟೆಸ್ಟ್​ ವಿಶ್ವಕಪ್​, ಆಶಸ್​) ಗೆದ್ದು ಬೀಗಿರುವ ಪ್ಯಾಟ್​ ಕಮ್ಮಿನ್ಸ್​ ಖರೀದಿಗೆ ಸನ್​ರೈಸರ್ಸ್​ ಜತೆಗೆ ಆರ್​ಸಿಬಿ ತಂಡ ಕೊನೇಹಂತದವರೆಗೆ ನಿಕಟ ಪೈಪೋಟಿ ನಡೆಸಿತು. ಹರಾಜಿಗೆ ಒಟ್ಟು 23.25 ಕೋಟಿ ರೂ. ಬಜೆಟ್​ ಮಾತ್ರ ಹೊಂದಿದ್ದ ನಡುವೆಯೂ ಆರ್​ಸಿಬಿ, ಕಮ್ಮಿನ್ಸ್​ಗೆ 20.25 ಕೋಟಿ ರೂ. ತನಕ ಬಿಡ್​ ಸಲ್ಲಿಸಿದ್ದು ಅಚ್ಚರಿ ಸೃಷ್ಟಿಸಿತು. ಕಮ್ಮಿನ್ಸ್​ 2 ಕೋಟಿ ರೂ. ಮೂಲಬೆಲೆ ಹೊಂದಿದ್ದರು.

    IPL​ ಇತಿಹಾಸದಲ್ಲೇ ಮಿಚೆಲ್​ ಸ್ಟಾರ್ಕ್​ ದುಬಾರಿ ಆಟಗಾರ: 24.75 ಕೋಟಿ ರೂ.ಗೆ KKR ಪಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts