More

    IPL​ ಇತಿಹಾಸದಲ್ಲೇ ಮಿಚೆಲ್​ ಸ್ಟಾರ್ಕ್​ ದುಬಾರಿ ಆಟಗಾರ: 24.75 ಕೋಟಿ ರೂ.ಗೆ KKR ಪಾಲು

    ನವದೆಹಲಿ: ಇದೇ ಮೊದಲ ಬಾರಿಗೆ ದೂರದ ದುಬೈ ನಗರ ಐಪಿಎಲ್​ ಹರಾಜಿಗೆ ವೇದಿಕೆಯಾಗಿದೆ. 17ನೇ ಆವೃತ್ತಿಗಾಗಿ ನಡೆಯುತ್ತಿರುವ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್​ ಬೌರಲ್ ಮಿಚೆಲ್​ ಸ್ಟಾರ್ಕ್​​ ದಾಖಲೆಯ ಮೊತ್ತಕ್ಕೆ ಸೇಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಹೊಸ ಇತಿಹಾಸವನ್ನು ಬರೆದಿದ್ದಾರೆ.

    ಮಿಚೆಲ್​ ಸ್ಟಾರ್ಕ್​ಗಾಗಿ ಕೊಲ್ಕತ್ತ ನೈಟ್​ ರೈಡರ್ಸ್ (ಕೆಕೆಆರ್​)​ ಮತ್ತು ಗುಜರಾತ್​ ಟೈಟಾನ್ಸ್​ ನಡುವೆ ಹರಾಜಿನಲ್ಲಿ ಭಾರಿ ಪೈಪೋಟಿ ನಡೆಯಿತು. ಅಂತಿಮವಾಗಿ 24.75 ಕೋಟಿ ರೂಪಾಯಿಗೆ ಸ್ಟಾರ್ಕ್​ ಕೆಕೆಆರ್​ ಪಾಲಾಗಿದ್ದಾರೆ. ಇಡೀ ಐಪಿಎಲ್​ ಟೂರ್ನಿಯ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಬಿಕರಿಯಾದ ಆಟಗಾರನೆಂಬ ಹೆಗ್ಗಳಿಕೆಯನ್ನು ಸ್ಟಾರ್ಕ್​ ಹೊಂದಿದ್ದಾರೆ.

    ಅಂದಹಾಗೆ ಮಿಚೆಲ್​ ಸ್ಟಾರ್ಕ್​ ಅವರು ದೀರ್ಘ ಸಮಯದ ಬಳಿಕ ಐಪಿಎಲ್​ ಹರಾಜಿಗೆ ಮರಳಿದ್ದು, ದಾಖಲೆಯ ಮೊತ್ತಕ್ಕೆ ಸೇಲಾಗಿದ್ದಾರೆ. 2015ರಲ್ಲಿ ಕೊನೆಯದಾಗಿ ಐಪಿಎಲ್​ ಆಡಿದರು. ಆಗ ಆರ್​ಸಿಬಿ ತಂಡದ ಭಾಗವಾಗಿದ್ದರು. ಏಳೆಂಟು ವರ್ಷಗಳ ಬಳಿಕ ಸ್ಟಾರ್ಕ್​ ಮತ್ತೆ ಐಪಿಎಲ್​ ಹರಾಜಿನಲ್ಲಿ ಭಾಗವಹಿಸಿದ್ದು, 24.75 ಕೋಟಿ ರೂ.ಗೆ ಸೇಲಾಗುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.

    ಇತ್ತಿಚೆಗಷ್ಟೇ ಆಸ್ಟ್ರೇಲಿಯಾ, ಭಾರತ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯನ್ನು ಪ್ಯಾಟ್​ ಕಮ್ಮಿನ್ಸ್​ ನಾಯಕತ್ವದಲ್ಲಿ ಜಯಿಸಿತು. ಇದರ ಪರಿಣಾಮ ಪ್ಯಾಟ್​ ಕಮ್ಮಿನ್ಸ್​ ಕೂಡ ಐಪಿಎಲ್​ನಲ್ಲಿ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ. ಬರೋಬ್ಬರಿ 20.50 ಕೋಟಿ ರೂ.ಗೆ ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಪಾಲಾಗಿದ್ದಅರೆ.

    ಉಳಿದಂತೆ ಡರೈಲ್​ ಮಿಚೆಲ್​ 14 ಕೋಟಿ ರೂ.ಗೆ ಸಿಎಸ್​ಕೆ ಪಾಲಾದರೆ, ಹರ್ಷಲ್​ ಪಟೇಲ್​ 11.7 ಕೋಟಿ ರೂ. ಪಂಜಾಬ್​ ಕಿಂಗ್ಸ್​ ಇಲೆವೆನ್​ ತಂಡದ ಪಾಲಾದರು.​

    ಶಾರ್ದೂಲ್ ಠಾಕೂರ್ (ರೂ. 4 ಕೋಟಿ) ಮತ್ತು ರಚಿನ್ ರವೀಂದ್ರ (ರೂ. 1.80 ಕೋಟಿ) ಅವರನ್ನು ಸಿಎಸ್‌ಕೆ ಖರೀದಿ ಮಾಡಿತು. ರೋವ್‌ಮನ್ ಪೊವೆಲ್ (ರಾಜಸ್ಥಾನ ರಾಯಲ್ಸ್​ 7.40 ಕೋಟಿ ರೂ.), ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್, 6.80 ಕೋಟಿ ರೂ.) ಹಾಗೂ ಹ್ಯಾರಿ ಬ್ರೂಕ್ (ಡೆಲ್ಲಿ ಕ್ಯಾಪಿಟಲ್​ 4 ಕೋಟಿ ರೂ.) ಉತ್ತಮ ಮೊತ್ತಕ್ಕೆ ಬಿಕರಿಯಾಗಿದ್ದಾರೆ. (ಏಜೆನ್ಸೀಸ್​)

    ಐಪಿಎಲ್​-17 ಆರಂಭಕ್ಕೆ ಮುಹೂರ್ತ ಫಿಕ್ಸ್​!

    ಐದು ಟ್ರೋಪಿಗಳನ್ನು ಗೆದ್ದು ಕೊಟ್ಟಿರುವ ನನಗೆ ಅಗೌರವವಾಗಿದೆ; ಅಸಮಾಧಾನ ಹೊರಹಾಕಿದ ಹಿಟ್​ಮ್ಯಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts