SRH ವಿರುದ್ಧ ಸೋತಿದ್ದೇ...! ಆರ್​ಸಿಬಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಜಿತೇಶ್​ ಬಚಾವ್​ ಮಾಡಿದ ರವಿಶಾಸ್ತ್ರಿ​ | RCB vs SRH

ವಿಜಯವಾಣಿ - 2025-05-24T073308.234
Published on

RCB vs SRH: ನಿನ್ನೆ (ಮೇ.24) ಲಖನೌದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಎಸ್​ಆರ್​ಎಚ್​ 42 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಆರ್​ಸಿಬಿಗೆ ದೊಡ್ಡ ಶಾಕ್ ನೀಡಿತು.

ಎಸ್​ಆರ್​ಎಚ್​ ನೀಡಿದ್ದ 232 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಆರ್​ಸಿಬಿಗೆ ಉತ್ತಮ ಬ್ಯಾಟಿಂಗ್​ ಸಿಗಲಿಲ್ಲ. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್​ ಸಾಲ್ಟ್​ ಅಬ್ಬರದ ಬ್ಯಾಟಿಂಗ್ ನಡೆಸಿದ್ದೇ ಆದರೂ ಹೆಚ್ಚಿನ ಕಾಲ ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಇನ್ನೂ ಕೊಹ್ಲಿ, ಸಾಲ್ಟ್​ ವಿಕೆಟ್​ ನಂತರ ಬಂದವರು ಕೂಡ ಹೆಚ್ಚಿನ ಕಾಲ ಕ್ರೀಸ್​ನಲ್ಲಿ ನಿಂತು ತಂಡದ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡಲಿಲ್ಲ. ಪಂದ್ಯ ಸೋತ ಬಳಿಕ ಮಾತನಾಡಿದ ಕ್ಯಾಪ್ಟನ್ ಜಿತೇಶ್ ಶರ್ಮ, ಮಾತನಾಡುವ ಭರದಲ್ಲಿ ದೊಡ್ಡ ಎಡವಟ್ಟಿಗೆ ಸಿಲುಕುತ್ತಿದ್ದರು. ಈ ಸೂಕ್ಷ್ಮತೆಯನ್ನು ಅರಿತ ರವಿಶಾಸ್ತ್ರಿ, ಮಾತನಾಡುವ ವೇಳೆಯೇ ಅವರ ಹೇಳಿಕೆಯನ್ನು ಸರಿಪಡಿಸಿದ್ದಾರೆ. ​

ಜಿತೇಶ್​ ಹೇಳಿಕೆ

"ನಾವು 20ರಿಂದ 30 ರನ್​ ಹೆಚ್ಚು ಕೊಟ್ಟೆವು. ಅವರು ಪವರ್​ಪ್ಲೇನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಎಸ್​ಆರ್​ಎಚ್​ ಪರಿಣಾಮಕಾರಿ ಬ್ಯಾಟಿಂಗ್​ ಬಗ್ಗೆ ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ. ಮೊದಲ 6 ಓವರ್​ ನಮಗೆ ಕಷ್ಟವಾಯಿತು. ನಮ್ಮ ಬೌಲರ್​ಗಳು ಉತ್ತಮ ಕಮಾಲ್ ಮಾಡಿದರು. ಮಧ್ಯಮ ಹಾಗೂ ಡೆತ್​ ಓವರ್​ನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದರು. ಈ ಪಂದ್ಯ ಸೋತಿದ್ದು ಒಳ್ಳೆದೇ ಆಯಿತು" ಎಂದು ಕೊನೆಯಲ್ಲಿ ಹೇಳಿದರು. ಜಿತೇಶ್​ ಶರ್ಮ ಹೀಗೇಳುತ್ತಿದ್ದಂತೆ ಅವರ ಮಾತನ್ನು ತಿದ್ದಿದ ರವಿಶಾಸ್ತ್ರಿ, "ಹೌದು. ಪ್ಲೇಆಫ್​ಗೆ ಆಡುವ ಮೊದಲು ಒಂದು ಪಂದ್ಯ ಸೋತರೆ, ಮುಂದಿನ ಪಂದ್ಯಗಳಿಗೆ ಒಂದಷ್ಟು ಬದಲಾವಣೆ ಮತ್ತು ಸರಿಪಡಿಸಿಕೊಳ್ಳುವ ಅವಕಾಶ ಸಿಗಲಿದೆ" ಎಂದು ಹೇಳಿದರು.

ತಿದ್ದಿದ ರವಿಶಾಸ್ತ್ರಿ

ಜಿತೇಶ್ ಶರ್ಮ ಹೇಳಿಕೆಯನ್ನು ಕೂಡಲೇ ಸರಿಪಡಿಸಿ, ಅದನ್ನು ಈ ರೀತಿ ಹೇಳಿದರೂ ಎಂಬಂತೆ ರವಿಶಾಸ್ತ್ರಿ ಬಿಂಬಿಸಿದರು. ತಾನು ಹೇಳಿದ್ದರ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ ಜಿತೇಶ್​, ರವಿಶಾಸ್ತ್ರಿ ಅವರ ಹೇಳಿಕೆಗೆ ಸರಿದೂಗಿಸಿಕೊಂಡು ಹೋಗಿದ್ದು ದೃಶ್ಯಗಳಲ್ಲಿ ಸೆರೆಯಾಗಿದೆ. ಜಿತೇಶ್​ರ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net