More

    ಶೀಘ್ರವೇ ಹೊಸ ಡಿಜಿಟಲ್​ ಪಾವತಿ ಸೇವೆಯನ್ನು ಒದಗಿಸಲಿದೆ ಆರ್​​ಬಿಐ

    ದೆಹಲಿ: ಆರ್​​ಬಿಐ ಹೊಸ ಪಾವತಿ ಸೇವೆಗಳನ್ನು ನೀಡಲು ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ತಯಾರಿ ನಡೆಸುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ UPI, NEFT, RTGS ಸೇವೆಗಳನ್ನು ಬಳಸಲು ನೆಟ್‌ವರ್ಕ್ ಮತ್ತು IT ಸೌಲಭ್ಯಗಳು ಕಡ್ಡಾಯವಾಗಿದೆ.

    ಇದನ್ನೂ ಓದಿ: ಅತ್ತೆ-ಸೊಸೆ ಜಗಳಕ್ಕೆ ಕಾರಣವಾಗುತ್ತಾ ಗೃಹಲಕ್ಷ್ಮಿ ಗ್ಯಾರಂಟಿ? ಮಹಿಳೆಯರ ಅಭಿಪ್ರಾಯ ಹೀಗಿತ್ತು…

    ಆದರೆ ನೈಸರ್ಗಿಕ ವಿಪತ್ತು, ಯುದ್ಧ ಹಾಗೂ ಮುಂತಾದ ತುರ್ತುಪರಿಸ್ಥಿತಿ ಸಂದರ್ಭಗಳು ನೆಟ್‌ವರ್ಕ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲೆಂದು ಆರ್​ಬಿಐ ಲೈಟ್‌ವೇಟ್ ಪೇಮೆಂಟ್ ಮತ್ತು ಸೆಟಲ್‌ಮೆಂಟ್ ಸಿಸ್ಟಮ್(LPSS) ಎಂಬ ನೂತನ ತಂತ್ರಜ್ಞಾನವನ್ನು ತರಲು ಮುಂದಾಗಿದೆ.

    ಇದು ನೈಸರ್ಗಿಕ ವಿಪತ್ತುಗಳು ಅಥವಾ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಎಲ್ಲಿಂದಲಾದರೂ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವುದರ ಜತೆಗೆ ಅಗತ್ಯಕ್ಕೆ ತಕ್ಕಂತೆ ಸಕ್ರಿಯಗೊಳಿಸುವ ವಿನ್ಯಾಸವನ್ನು ಒಳಗೊಂಡಿದೆ ಎನ್ನಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts