ನವದೆಹಲಿ: ಕೆಲವು ಖಾಸಗಿ ಬ್ಯಾಂಕ್ ಗಳು ನಿಯಮಗಳನ್ನು ಗಾಳಿಗೆ ತೂರಿದ್ದು, ಇದೇ ರೀತಿ ಮುಂದುವರಿದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರ್ ಬಿಐ ಎಚ್ಚರಿಸಿದೆ.
ಇದನ್ನೂ ಓದಿ: ಟ್ರೈನಿ ವೈದ್ಯೆ ಹತ್ಯೆ ಕೇಸ್; ಶವಗಳೊಂದಿಗೆ ಆರೋಪಿ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಪತ್ತೆ
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಬ್ಯಾಂಕ್‌ಗಳಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ಕೆಲವೊಮ್ಮೆ ಸಮಸ್ಯೆ ಗಂಭೀರವಾಗಿದ್ದರೆ ಬ್ಯಾಂಕಿನ ಪರವಾನಗಿಯನ್ನೂ ರದ್ದುಪಡಿಸಲಾಗುತ್ತದೆ. ಬ್ಯಾಂಕ್‌ಗಳು ತಮ್ಮ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಆರ್‌ಬಿಐ ಎಚ್ಚರಿಸಿದೆ.
ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ, ಆಕ್ಸಿಸ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕ್ರಮ ಕೈಗೊಂಡಿದೆ. ಇವೆರಡೂ ಬ್ಯಾಂಕ್‌ಗಳಿಗೆ 2.91 ಕೋಟಿ ರೂ.ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಾನೂನು ಮತ್ತು ನಿಯಂತ್ರಕ ನಿಯಮಗಳ ಉಲ್ಲಂಘನೆಗೆ ಭಾರಿ ದಂಡವನ್ನು ವಿಧಿಸಲಾಶಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ನಿಬಂಧನೆಗಳನ್ನು ಅನುಸರಿಸದಿರುವುದು ಸೇರಿದಂತೆ. ಆಕ್ಸಿಸ್ ಬ್ಯಾಂಕ್ ರೂ. 1.91 ಕೋಟಿ ದಂಡ ವಿಧಿಸಲಾಗಿದೆ.
ಇನ್ನು ಠೇವಣಿಗಳ ಮೇಲಿನ ಬಡ್ಡಿ, ಬ್ಯಾಂಕ್ ವಸೂಲಾತಿ ಏಜೆಂಟ್ ಮತ್ತು ಬ್ಯಾಂಕ್ ಗ್ರಾಹಕ ಸೇವೆಗಳಿಗೆ ಸಂಬಂಧಿಸಿದಂತೆ ನಿಯಮಗಳ ಅನುಸರಣೆ ಇಲ್ಲದ ಕಾರಣ ಎಚ್ಡಿಎಫ್ಸಿ ಬ್ಯಾಂಕ್ ಗೆ ಸಹ 1ಕೋಟಿ ರೂ. ದಂಡ ವಿಧಿಸುವುದಾಗಿ ಕೇಂದ್ರ ಬ್ಯಾಂಕ್ ತಿಳಿಸಿದೆ.
ಎರಡು ಬ್ಯಾಂಕ್ ಗಳಲ್ಲಿ ಈ ತಪ್ಪುಗಳು ಆಗಿರುವುದನ್ನು ಮನಗಂಡು ದಂಡವನ್ನು ಏಕೆ ವಿಧಿಸಬಾರದು ಎಂದು ತಿಳಿಸುವಂತೆ ಈ ಹಿಂದೆ ನೋಟಿಸ್ ನೀಡಿತ್ತು. ಬ್ಯಾಂಕ್‌ಗಳು ಉತ್ತರಿಸಿದ ನಂತರ ದಂಡ ವಿಧಿಸಿದೆ.
ನಿಯಮ ಉಲ್ಲಂಘಿಸಿದ್ದರಿಂದ ಈ ಹಿಂದೆ ಆರ್ ಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪೂನಾವಾಲಾ ಕಾರ್ಪೊರೇಷನ್, ಕೋಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ಕ್ರಮ ಕೈಗೊಂಡಿತ್ತು.